ಕುಂಬಳೆ: ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯು ಕಾಸರಗೋಡು ಜಿಲ್ಲೆಯ ಬರಹಗಾರರನ್ನು ಪ್ರೋತ್ಸಾಹಿಸಲು ನಡೆಸಿದ ಕಾಸರಗೋಡು ಜಿಲ್ಲಾಮಟ್ಟದ ಕಾವ್ಯ ಸ್ಪರ್ಧೆಯಲ್ಲಿ ಸೌಮ್ಯ ಪ್ರವೀಣ್ ಮಂಗಳೂರು ಪ್ರಥಮ, ಲಕ್ಷ್ಮಿ ಕೆ ಕಾಸರಗೋಡು ದ್ವಿತೀಯ, ಶ್ರೀವಿದ್ಯಾ ಪಡ್ರೆ ಬೆಂಗಳೂರು ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಬಹುಮಾನ ವಿಜೇತರು, ಭಾಗವಹಿಸಿದ ಸ್ಪರ್ಧಿಗಳು ಮತ್ತು ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಕಾಸರಗೋಡಿನ ಸಾಹಿತ್ಯಪ್ರಿಯರಿಗೆ ಸಾಹಿತ್ಯ ಗಂಗಾ ವೇದಿಕೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾμï ಪಟ್ಟಾಜೆ ಅಭಿನಂದನೆಗಳನ್ನು ತಿಳಿಸಿದ್ದಾರೆ.




.jpg)
