ಬದಿಯಡ್ಕ : ಇಲ್ಲಿನ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಆಶ್ರಯದಲ್ಲಿ ಯಕ್ಷಗಾನದ ಮುಮ್ಮೇಳ ಹಾಗೂ ಹಿಮ್ಮೇಳದ ತರಗತಿಗಳು ಜೂನ್ 18ರಂದು ಸಂಜೆ 4.30ಕ್ಕೆ ಬದಿಯಡ್ಕದ ನವಜೀವನ ವಿದ್ಯಾಲಯ (ಶ್ರೀ ಮೂಕಾಂಬಿಕಾ ಸರ್ವಿಸ್ ಸ್ಟೇಷನ್ ಎದುರು)ದಲ್ಲಿ ಆರಂಭವಾಗಲಿದೆ.
ಕಲಾಸಕ್ತರಿಗೆ ವಯೋಮಿತಿ ಸಹಿತ ಯಾವುದೇ ನಿಬಂಧನೆಗಳಿಲ್ಲ. ಯಕ್ಷಗಾನದ ಮುಮ್ಮೇಳ ಹಾಗೂ ಹಿಮ್ಮೇಳ ಶಿಕ್ಷಕ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರು ಗುರುಗಳಾಗಿ ಸಹಕರಿಸಲಿದ್ದಾರೆ. ಪ್ರತೀ ಭಾನುವಾರ ಸಂಜೆ 4.30ರಿಂದ ತರಗತಿ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9633876833ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.




