ಮಂಜೇಶ್ವರ: ಪೊಯ್ಯೆ ಚಾಮುಂಡೇಶ್ವರಿ ಕ್ಷೇತ್ರ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆ ಜೂ. 18 ರಂದು ಭಾನುವಾರ ಬೆಳಿಗ್ಗೆ8.30ಕ್ಕೆ ಕ್ಷೇತ್ರದ ವಠಾರದಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ ಶಿವರಾಮ ಶೆಟ್ಟಿ ಮುಗೇರ್ ಗುತ್ತು ವಹಿಸುವರು. ಸಭೆಯಲ್ಲಿ ಕಳೆದ ವರ್ಷದ ಲೆಕ್ಕಪತ್ರವನ್ನು ಮಂಡಿಸಲಾಗುವುದು. ಕ್ಷೇತ್ರ ಅಭಿವೃದ್ಧಿಯ ಕುರಿತು ಚರ್ಚಿಸಲಾಗುವುದು ಹಾಗೂ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಈ ಸಭೆಗೆ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಬೇಕೆಂದು ವಿನಂತಿಸಲಾಗಿದೆ.




