ಪೆರ್ಲ: ಪಡ್ರೆ ಜಿ.ಎಚ್ ಎಸ್ ಎಸ್ ಶಾಲೆಯಲ್ಲಿ ಮಕ್ಕಳಿಗಾಗಿ ವಿವಿಧ ಕ್ಲಬ್ ಗಳ ರೂಪೀಕರಣ ನಡೆಯಿತು. ಗಣಿತ, ಐ.ಟಿ, ವಿಜ್ಞಾನ, ಸ್ಮಾರ್ಟ್ ಎನರ್ಜಿ,ಸಮಾಜ ವಿಜ್ಞಾನ, ವಿದ್ಯಾ ರಂಗ ಹಾಗೂ ವೃತ್ತಿ ಶಿಕ್ಷಣ ಕ್ಲಬ್ ಗಳನ್ನು ಶಾಲಾ ಮುಖ್ಯ ಶಿಕ್ಷಕ ವಾಸುದೇವ ನಾಯಕ್ ಅವರು ಸರಳ ಪ್ರಯೋಗದ ಮೂಲಕ ಉದ್ಘಾಟಿಸಿದರು. ಶಿಕ್ಷಕರು ಹಾಗು ಮಕ್ಕಳು ಇತಿಮಿತಿಗಳನ್ನು ಗಮನ ದಲ್ಲಿ ಟ್ಟುಕೊಂಡು ಪ್ರತೀ ಕ್ಲಬ್ಬಿನ ಚಟುವಟಿಕೆಗಳಲ್ಲಿ ವೈವಿಧ್ಯತೆಯನ್ನು ತರಲು ಪ್ರಯತ್ನಿಸಬೇಕೆಂದು ಅವರು ಈ ಸಂದರ್ಭ ಹೇಳಿದರು.
ಹೈಸ್ಕೂಲ್ ವಿಭಾಗದ ವಿಜ್ಞಾನ ಅಧ್ಯಾಪಕ ಶೀನಪ್ಪ ಮಾಸ್ತರ್ ಅವರ ನೇತೃತ್ವದಲ್ಲಿ ಪ್ರತೀ ಕ್ಲಬ್ ಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೋಪಾಲ್ ಮಾಸ್ತರ್ ಶುಭ ಹಾರೈಸಿದರು. ಅಧ್ಯಾಪಕಿ ಅಜಿತ ವಂದಿಸಿದರು. ಶಿಕ್ಷಕ ವೃಂದ ಉಪಸ್ಥಿತರಿದ್ದರು.




.jpg)
