ಕಾಸರಗೋಡು: ನರಗದ ದ್ವಾರಕ ನಗರದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ ಬಾಲ ಸಂಸ್ಕಾರ ಕೇಂದ್ರ ಮುಂದೆ ಶ್ರೀ ಲಕ್ಷ್ಮೀ ವೆಂಕಟೇಶ ವಿದ್ಯಾಲಯ ಆದಾಗ ಒಟ್ಟು 27 ವರ್ಷಗಳ ಕಾಲ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಭಡ್ತಿ ಪಡೆದ ಆನೆಬಾಗಿಲು ನಿವಾಸಿ ಶ್ರೀವಳ್ಳಿ ಗಣೇಶ ಆಚಾರ್ಯ ಅವರನ್ನು ವಿಶ್ವಕರ್ಮ ಭಜನಾ ಮಂದಿರದಲ್ಲಿ ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ, ಶ್ರೀ ವಿಶ್ವಕರ್ಮ ಯುವಕ ಸಂಘ ಹಾಗು ಶ್ರೀ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಸಂಗೀತ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅವರು ಶಾಲು ಹೊದಿಸಿ ಶುಭಹಾರೈಸಿದರು. ಸರಸ್ವತಿ ನಾರಾಯಣ ಆಚಾರ್ಯ ಹಾಗು ಹೇಮಲತಾ ಗಣೇಶ ಆಚಾರ್ಯ ಅವರು ಹಾರಾರ್ಪಣೆಗೈದರು. ಸಂಘದ ಅಧ್ಯಕ್ಷ ತಾಳಿಪಡ್ಪು ಭುವನೇಶ ಆಚಾರ್ಯ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಪೆರ್ಣೆ ವಿಷ್ಣು ಆಚಾರ್ಯ, ಉಪಾಧ್ಯಕ್ಷ ಸುರೇಶ್ ಡಿ.ಆಚಾರ್ಯ, ಕಾರ್ಯದರ್ಶಿ ಗಣೇಶ ಆಚಾರ್ಯ, ಜತೆ ಕಾರ್ಯದರ್ಶಿಗಳಾದ ವೇಣುಗೋಪಾಲ ಆಚಾರ್ಯ, ವಸಂತ ಕೆರೆಮನೆ, ಕೋಶಾಧಿಕಾರಿ ಪ್ರವೀಣ್ ಕುಮಾರ್ ನಲ್ಕ, ಸದಸ್ಯರಾದ ಸು„ೀಶ್ ಆಚಾರ್ಯ, ತುಕಾರಾಮ ಆಚಾರ್ಯ ಕೆರೆಮನೆ, ಹರೀಶ್ ಆಚಾರ್ಯ ಆನೆಬಾಗಿಲು, ಹರೀಶ್ ಆಚಾರ್ಯ ವಿವೇಕಾನಂದ ನಗರ, ಯುವಕ ಸಂಘದ ಹಾಗು ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು, ಪುಟಾಣಿಗಳು ಉಪಸ್ಥಿತರಿದ್ದರು. ಭುವನೇಶ ಆಚಾರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.
ಶ್ರೀವಳ್ಳಿ ಗಣೇಶ ಆಚಾರ್ಯ ಅವರು ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಮಂದಿರದ ಉಪ ಸಮಿತಿಯಾದ ಶ್ರೀ ವಿಶ್ವಕರ್ಮ ಮಹಿಳಾ ಸಂಘದ ಕಾರ್ಯದರ್ಶಿಯಾಗಿಯೂ, ವಿವಿಧ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.




