ಇಂಫಾಲ್: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಯಾಯಿನ್ಗಾಂಗಪೊಕ್ಪಿ (ಯುಕೆಪಿಐ)ಯಿಂದ ಬೆಟ್ಟಗಳ ಕಡೆಗೆ ಹೊರಟಿದ್ದ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ಉರಂಗ್ಪೇಟೆ ಮತ್ತು ಗ್ವಾಲ್ತಾಬಿ ಗ್ರಾಮಗಳತ್ತ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಇಂಫಾಲ್ ಪಶ್ಚಿಮ ಜಿಲ್ಲೆಯ ಉತ್ತರ ಬೋಲ್ಜಂಗ್ನಲ್ಲಿ ಅಪರಿಚಿತ ಬಂದೂಕುಧಾರಿಯೊಬ್ಬ ಹಾರಿಸಿದ ಗುಂಡೇಟಿನಿಂದ ಇಬ್ಬರು ಯೋಧರು ಗಾಯಗೊಂಡಿದ್ದರು. ತಕ್ಷಣವೇ ಭದ್ರತಾ ಪಡೆಗಳು ಸುತ್ತಮುತ್ತ ನಡೆಸಿದ್ದ ಶೋಧ ಕಾರ್ಯಾಚರಣೆಯಲ್ಲಿ ಇನ್ಸಾಸ್ ಲೈಟ್ ಮಷಿನ್ ಗನ್ ಮತ್ತು ಇನ್ಸಾಸ್ ರೈಫಲ್ ವಶಪಡಿಸಿಕೊಳ್ಳಲಾಗಿತ್ತು. ಇದಾದ ಮರುದಿನವೇ ಈ ಘಟನೆ ನಡೆದಿದೆ.
ತಕ್ಷಣವೇ ಸ್ಥಳಕ್ಕೆ ನಿಯೋಜಿಸಿದ ಭದ್ರತಾ ಪಡೆಗಳು, ಜನರನ್ನು ಸ್ಥಳಾಂತರಿಸಿರುವ ಈ ಹಳ್ಳಿಗಳಲ್ಲಿ ಯಾವುದೇ ಹಾನಿ ಉಂಟಾಗದಂತೆ ತಡೆದಿವೆ. ಆದಾಗ್ಯೂ, ವೈಕೆಪಿಐ ಮತ್ತು ಸೆಜಾಂಗ್ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳು ಕಾಲಿಡದಂತೆ ಮಹಿಳೆಯರ ದೊಡ್ಡ ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿದೆ.