ಕಾಸರಗೋಡು: ಗಟ್ಟಿ ಸಮಾಜ ಸೇವಾ ಸಂಘದ ಮಹಾಸಭೆಯು ಮಧೂರು ಸನಿಹದ ಪರಕ್ಕಿಲದ ಗಟ್ಟಿ ಸಮಾಜ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ ನಡೆಯಿತು. ಸೇವಾ ಸಂಘ ಅಧ್ಯಕ್ಷ ಮುರಳಿಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಗುರಿಕಾರರಾದ ಶ್ರೀಧರಗಟ್ಟಿ ಮನ್ನಿಪಾಡಿ ಹಾಗೂ ಮೋಹನ್ ಗಟ್ಟಿ ಮಧೂರು ಉಪಸ್ಥಿತರಿದ್ದರು. ನೂತನ ಗುರಿಕಾರರಾಗಿ ವಿಠಲಗಟ್ಟಿ ಪರಕ್ಕಿಲ ಇವರು ಆಯ್ಕೆಗೊಂಡರು. ಕಾರ್ಯದರ್ಶಿ ಮಧುಕರ ಗಟ್ಟಿ 2022- 23ನೇ ವರ್ಷದ ವರದಿ ಮತ್ತು ಚಂದ್ರಶೇಖರಗಟ್ಟಿ ಮನ್ನಿಪಾಡಿ ವರ್ಷಿಕ ಲೆಕ್ಕಪತ್ರ ಮಂಡಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದಿಂದ ಈ ಬಾರಿಯ "ಡಾಕ್ಟರೇಟ್" ಪಡೆದ ಸಮಾಜದ ಸದಸ್ಯ ರಾಜೇಶ್ ಗಟ್ಟಿ ಮಧೂರು ಅವರನ್ನು ಶಾಲು ಹೊದಿಸಿ, ಪೇಟವತೊಡಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಬಾರಿಯ ಎಸ್ಸೆಸೆಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಭಾಗದಲ್ಲಿ ಎ ಪ್ಲಸ್ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. 2023-2024'ರ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗಣೇಶ್ ಗಟ್ಟಿ ಮನ್ನಿಪ್ಪಾಡಿ ಅಧ್ಯಕ್ಷ, ರಾಜೇಶ್ ಗಟ್ಟಿ ಉಳಿಯ ಉಪಾಧ್ಯಕ್ಷ, ಚಂದ್ರಶೇಖರಗಟ್ಟಿ ಮನ್ನಿಪ್ಪಾಡಿ ಪ್ರಧಾನ ಕಾರ್ಯದರ್ಶಿ, ನಾಗೇಶ್ ಗಟ್ಟಿ ಉಳಿಯ ಜತೆಕಾರ್ಯದರ್ಶಿ, ಮಧುಕರ ಗಟ್ಟಿ ಮಧೂರು ಕೋಶಾಧಿಕಾರಿ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುರಳಿ ಗಟ್ಟಿ, ಜಯರಾಮ ಗಟ್ಟಿ, ಅಶೋಕ ಗಟ್ಟಿ, ವಾಸುಗಟ್ಟಿ, ಹರೀಶ್ ಗಟ್ಟಿ, ರತೀಶ್ ಗಟ್ಟಿ, ಸತೀಶ್ಚಂದ್ರ ಗಟ್ಟಿ, ಅಶೋಕಗಟ್ಟಿ, ಸುರೇಶ್ ಗಟ್ಟಿ, ಯು.ಹರೀಶ್ ಗಟ್ಟಿ, ಅವರನ್ನು ಆಯ್ಕೆ ಮಾಡಲಾಯಿತು. ವಾರ್ಷಿಕ ಮಹಾಸಭೆಯಲ್ಲಿ ಎಲ್. ಕೆ ಜಿ. ಯಿಂದ ಪ್ಲಸ್ ಟು ವರೆಗಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಸಮಾರೋಪ ಸಮಾರಂಭದಲ್ಲಿ ಶೋಭಾ ಗಟ್ಟಿ ಟೀಚರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಧುಕರ ಗಟ್ಟಿ ಸ್ವಾಗತಿಸಿದರು. ಹರೀಶ್ ಗಟ್ಟಿ ಉಳಿಯ ವಂದಿಸಿದರು.