HEALTH TIPS

'ಪಿಎಂ-ಪ್ರಣಾಮ್'ಗೆ ಕೇಂದ್ರ ಸಂಪುಟ ಒಪ್ಪಿಗೆ

                ವದೆಹಲಿ: ರಾಸಾಯನಿಕ ಗೊಬ್ಬರಗಳ ಉಪಯೋಗ ಕಡಿಮೆ ಮಾಡಿ, ಪರ್ಯಾಯ ರಸಗೊಬ್ಬರಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯಗಳನ್ನು ಉತ್ತೇಜಿಸುವುದಕ್ಕಾಗಿ 'ಪಿಎಂ-ಪ್ರಣಾಮ್' ಎಂಬ ನೂತನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

             ಅಲ್ಲದೇ, ಪ್ರತಿ ಕ್ವಿಂಟಲ್‌ ಕಬ್ಬಿಗೆ ನೀಡುವ ಎಫ್‌ಆರ್‌ಪಿಯನ್ನು ₹ 10ರಷ್ಟು ಹೆಚ್ಚಿಸುವುದಕ್ಕೆ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಅನುಮೋದನೆ ನೀಡಿದೆ.

               ಕೇಂದ್ರ ರಸಗೊಬ್ಬರ ಸಚಿವ ಮನ್ಸುಖ್‌ ಮಾಂಡವಿಯಾ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

               'ಭೂಮಿಯಲ್ಲಿನ ಪೋಷಕಾಂಶಗಳ ಪ್ರಮಾಣ ಹೆಚ್ಚಿಸುವುದು ಹಾಗೂ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ 'ಪಿಎಂ-ಪ್ರಣಾಮ್' (ಪಿಎಂ ಪ್ರೊಗ್ರಾಂ ಫಾರ್ ರಿಸ್ಟೋರೇಷನ್, ಅವೇರ್‌ನೆಸ್, ಜನರೇಷನ್, ನೌರಿಷ್‌ಮೆಂಟ್‌ ಅಂಡ್ ಅಮಿಲಿಯೋರೇಷನ್ ಆಫ್‌ ಮದರ್‌ ಅರ್ತ್‌) ಎಂದು ಕರೆಯಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬಜೆಟ್‌ ಮಂಡನೆ ವೇಳೆ ಈ ಯೋಜನೆಯನ್ನು ಘೋಷಿಸಿದ್ದರು.

               'ಪರ್ಯಾಯ ಗೊಬ್ಬರಗಳನ್ನು ಬಳಕೆಯನ್ನು ಉತ್ತೇಜಿಸುವ ಹಾಗೂ ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುವುದು' ಎಂದು ಸಚಿವ ಮಾಂಡವಿಯಾ ಹೇಳಿದರು.


                       'ರಾಜ್ಯವೊಂದು 10 ಲಕ್ಷ ಟನ್‌ ರಸಗೊಬ್ಬರ ಬಳಸುತ್ತದೆ ಎಂದು ಭಾವಿಸೋಣ. ಈ ಪ್ರಮಾಣವನ್ನು 3 ಲಕ್ಷ ಟನ್‌ಗೆ ಇಳಿಸಿದಲ್ಲಿ ಸಬ್ಸಿಡಿಯಲ್ಲಿ ₹ 3 ಸಾವಿರ ಕೋಟಿ ರೂಪಾಯಿ ಉಳಿತಾಯ ಮಾಡಿದಂತಾಗುತ್ತದೆ. ಈ ಹಣದ ಪೈಕಿ ಕೇಂದ್ರ ಸರ್ಕಾರವು ಶೇ 50ರಷ್ಟು ಅಂದರೆ, ₹ 1,500 ಕೋಟಿಯನ್ನು ರಾಜ್ಯಗಳಿಗೆ ನೀಡುತ್ತದೆ. ಈ ಹಣವನ್ನು ಪರ್ಯಾಯ ಗೊಬ್ಬರಗಳ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಗಳು ಬಳಕೆ ಮಾಡಿಕೊಳ್ಳಬೇಕು' ಎಂದು ಮಾಂಡವಿಯಾ ವಿವರಿಸಿದರು.

                 ಹೆಚ್ಚಳ: ಬರುವ ಅಕ್ಟೋಬರ್‌ನಿಂದ ಆರಂಭವಾಗುವ ಹಂಗಾಮಿಗೆ ಅನ್ವಯಿಸುವಂತೆ, ಕಬ್ಬಿಗೆ ನೀಡುವ ಎಫ್‌ಆರ್‌ಪಿಯಲ್ಲಿ ₹ 10 ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದಾಗಿ ಪ್ರತಿ ಕ್ವಿಂಟಲ್‌ಗೆ ನೀಡುವ ಎಫ್‌ಆರ್‌ಪಿ ₹ 315 ಆಗಲಿದೆ ಎಂದು ಸಚಿವ ಅನುರಾಗ್‌ ಠಾಕೂರ್‌ ವಿವರಿಸಿದರು.

ಪ್ರಧಾನಿ ನರೇಂದ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಠಾಕೂರ್‌ ಹೇಳಿದರು.

                   'ಕಳೆದ ವರ್ಷ ಪ್ರತಿ ಕ್ವಿಂಟಲ್‌ ಕಬ್ಬಿಗೆ ₹ 305 ಎಫ್‌ಆರ್‌ಪಿ ನಿಗದಿ ಮಾಡಲಾಗಿತ್ತು. ಈಗ, ₹ 315ಕ್ಕೆ ಹೆಚ್ಚಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ 3.28ರಷ್ಟು ಹೆಚ್ಚಳ ಮಾಡಿದಂತಾಗಿದೆ' ಎಂದು ಹೇಳಿದರು.

               ಮಸೂದೆಗೆ ಅಸ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೋತ್ಸಾಹ ನೀಡುವ ಉದ್ದೇಶದ 'ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ-2023'ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಸಂಪುಟ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಸಚಿವ ಅನುರಾಗ್‌ ಠಾಕೂರ್‌ 'ಬರುವ ಸಂಸತ್‌ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು. ಮಸೂದೆ ಅಂಗೀಕಾರ ದೊರೆತ ನಂತರ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಮಂಡಳಿ ಕಾಯ್ದೆ2008 ರದ್ದಾಗುವುದು' ಎಂದು ಹೇಳಿದರು. '2027-28ರವರೆಗೆ ಸಂಶೋಧನೆಗಾಗಿ ಕೇಂದ್ರ ಸರ್ಕಾರ ₹ 50 ಸಾವಿರ ಕೋಟಿ ತೆಗೆದಿರಿಸಿದೆ. ಈ ಪೈಕಿ ಮುಂದಿನ ಐದು ವರ್ಷಗಳ ವರೆಗೆ ₹ 14 ಸಾವಿರ ಕೋಟಿಯನ್ನು ಸರ್ಕಾರವೇ ಒದಗಿಸುವುದು. ಉಳಿದ ಮೊತ್ತವನ್ನು ಸಾರ್ವಜನಿಕ ಉದ್ದಿಮೆಗಳು ಕೈಗಾರಿಕೆಗಳು ಪ್ರತಿಷ್ಠಾನಗಳು ಅಂತರರಾಷ್ಟ್ರೀಯ ಸಂಶೋಧನಾ ಸಂಘಟನೆಗಳಿಂದ ಸಂಗ್ರಹಿಸಲಾಗುವುದು' ಎಂದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries