ನವದೆಹಲಿ: 'ಕೊಲೆ ಪ್ರಕರಣದಲ್ಲಿ ಎಫ್‌ಐಆರ್ ಮಹತ್ವದ ದಾಖಲೆ. ಹೀಗಾಗಿ, ಎಫ್‌ಐಆರ್‌ನಲ್ಲಿ ಯಾವುದಾದರೂ ಪದ, ವಾಕ್ಯಗಳನ್ನು ಸೇರಿಸುವುದರಿಂದ ಅದು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
0
samarasasudhi
ಜೂನ್ 16, 2023
ನವದೆಹಲಿ: 'ಕೊಲೆ ಪ್ರಕರಣದಲ್ಲಿ ಎಫ್‌ಐಆರ್ ಮಹತ್ವದ ದಾಖಲೆ. ಹೀಗಾಗಿ, ಎಫ್‌ಐಆರ್‌ನಲ್ಲಿ ಯಾವುದಾದರೂ ಪದ, ವಾಕ್ಯಗಳನ್ನು ಸೇರಿಸುವುದರಿಂದ ಅದು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
ನ್ಯಾಯಮೂರ್ತಿಗಳಾದ ವಿ.ರಾಮಸುಬ್ರಮಣಿಯನ್ ಹಾಗೂ ರಾಜೇಶ್ ಬಿಂದಲ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
1995ರಲ್ಲಿ ಉತ್ತರಾಖಂಡದ ರೂರ್ಕಿಯಲ್ಲಿ ನಡೆದಿದ್ದ ಅಲ್ತಾಫ್ ಹುಸೇನ್ ಎಂಬುವವರ ಕೊಲೆ ಪ್ರಕರಣದಲ್ಲಿ ಮೊಹ್ಮದ್ ಮುಸ್ಲಿಂ ಅವರನ್ನು ಆರೋಪ ಮುಕ್ತಗೊಳಿಸಿ ನ್ಯಾಯಪೀಠ ಆದೇಶಿಸಿತು.
ಈ ಪ್ರಕರಣದಲ್ಲಿ, ಮೊಹ್ಮದ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಎತ್ತಿ ಹಿಡಿದು 2010ರ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಪೀಠ ರದ್ದುಗೊಳಿಸಿತು.