HEALTH TIPS

ಸಿಂಗಾಪುರದಲ್ಲಿ ನಡೆದ ಗೌಪ್ಯ ಗುಪ್ತಚರ ಸಭೆಯಲ್ಲಿ ಭಾಗವಹಿಸಿದ್ದ ರಾ ಮುಖ್ಯಸ್ಥ: ವರದಿ

                   ವದೆಹಲಿ:ಶಾಂಗ್ರಿ-ಲಾ ರಕ್ಷಣಾ ಶೃಂಗಸಭೆಯ ವೇಳೆಯಲ್ಲಿಯೇ ಸಿಂಗಾಪುರ ಸರ್ಕಾರ ಸುಮಾರು ಎರಡು ಡಜನ್‌ ದೇಶಗಳ ಹಿರಿಯ ಗುಪ್ತಚರ ಅಧಿಕಾರಿಗಳ ರಹಸ್ಯ ಸಭೆ ನಡೆಸಿದೆ ಎಂದು ವರದಿಯಾಗಿದೆ.

                     ಈ ಸಭೆಯಲ್ಲಿ ಭಾರತದ ರಾ - ರಿಸರ್ಚ್‌ ಎಂಡ್‌ ಅನಾಲಿಸಿಸ್‌ ವಿಂಗ್‌ ಮುಖ್ಯಸ್ಥರಾದ ಸಮಂತ್‌ ಗೋಯೆಲ್‌ ಕೂಡ ಭಾಗವಹಿಸಿದ್ದರೆಂದು ಮೂಲವೊಂದು ದೃಢಪಡಿಸಿದೆ ಎಂದು thewire.in ವರದಿ ಮಾಡಿದೆ.

                      ಆದರೆ ಇಂತಹ ರಹಸ್ಯ ಸಭೆಗಳು ಪ್ರತಿ ವರ್ಷ ರಕ್ಷಣಾ ಶೃಂಗಸಭೆಯ ವೇಳೆ ನಡೆಯುತ್ತಿದೆ ಹಾಗೂ ಈ ಹಿಂದೆ ಅದರ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಹೆಚ್ಚು ಔಪಚಾರಿಕ ಮತ್ತು ಮುಕ್ತ ರಾಜತಾಂತ್ರಿಕತೆ ಕಷ್ಟವಾದಾಗ ಇಂತಹ ಸಭೆಗಳನ್ನು ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿಯ ಸಭೆಯಲ್ಲಿ ರಷ್ಯಾ, ಉಕ್ರೇನ್‌ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

                    ಶಾಂಗ್ರಿ-ಲಾ ರಕ್ಷಣಾ ಶ್ರಂಗ ಸಭೆಯನ್ನು ಸಿಂಗಾಪುರದ ಶಾಂಗ್ರಿ ಲಾ ಹೋಟೆಲಿನಲ್ಲಿ ಪ್ರತಿವರ್ಷ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸ್ಟ್ರೆಟಜಿಕ್‌ ಸ್ಟಡೀಸ್‌ ಆಯೋಜಿಸುತ್ತದೆ.

ಈ ವರ್ಷದ ಸಭೆಯಲ್ಲಿ ಭಾರತ ಸಹಿತ 49 ದೇಶಗಳ 600 ಪ್ರತಿನಿಧಿಗಳು ಭಾಗವಹಿಸಿದ್ದರು. ದಿಕ್ಸೂಚಿ ಭಾಷಣವನ್ನು ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಆಲ್ಬನೀಸ್‌ ನೀಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries