ನವದೆಹಲಿ: 'ಬೆಂಗಳೂರಿನಲ್ಲಿ ಜುಲೈ 10ರಿಂದ 12ರವರೆಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದು ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಶುಕ್ರವಾರ ಇಲ್ಲಿ ತಿಳಿಸಿದರು.
0
samarasasudhi
ಜೂನ್ 16, 2023
ನವದೆಹಲಿ: 'ಬೆಂಗಳೂರಿನಲ್ಲಿ ಜುಲೈ 10ರಿಂದ 12ರವರೆಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದು ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಶುಕ್ರವಾರ ಇಲ್ಲಿ ತಿಳಿಸಿದರು.
'ದೇಶದ ವಿವಿಧೆಡೆಯಿಂದ ಸಂಘಟನೆಯ 3 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ' ಎಂದು ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
'ಮೋದಿ ನೇತೃತ್ವದ ಸರ್ಕಾರ ದೇಶದ ಜನರಿಗೆ ಹಲವು ಭರವಸೆ ನೀಡಿದೆ. ಆದರೂ ಜನರು ತೊಂದರೆಯಲ್ಲಿದ್ದಾರೆ. ಆದ್ದರಿಂದ ಯುವ ಕಾಂಗ್ರೆಸ್ ದೇಶದಾದ್ಯಂತ 'ಉತ್ತಮ ಭಾರತಕ್ಕಾಗಿ ಬುನಾದಿ' ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲಿದೆ' ಎಂದರು.
ಯುವ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲವರು ಮಾತನಾಡಿ 'ಅಭಿಯಾನದ ಮೂಲಕ ನಾವು ದೇಶದ ಯುವಕರ ಮನದ ಮಾತು ಆಲಿಸುತ್ತೇವೆ. ಅವರನ್ನು ಅರ್ಥೈಸಿಕೊಂಡು ಉತ್ತಮ ಭಾರತದ ಬುನಾದಿಗಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ನ ವರಿಷ್ಠರು ಇದರಲ್ಲಿ ಭಾಗಿಯಾಗುತ್ತಾರೆ' ಎಂದರು.