HEALTH TIPS

ಮದ್ಯದ ಅಮಲಿನಲ್ಲಿ ರೈಲ್ವೆ ಹಳಿ ಮೇಲೆಯೇ ನಿದ್ರೆಗೆ ಜಾರಿದ ವ್ಯಕ್ತಿಯ ಜೀವ ಉಳಿಸಿದ ಮುಂಗಾರು ಮಳೆ!

                   ಕೊಲ್ಲಂ: ಕಂಠಪೂರ್ತಿ ಕುಡಿದು ಮದ್ಯದ ಅಮಲಿನಲ್ಲಿ ರೈಲು ಹಳಿಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬನ ಜೀವ ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಉಳಿದಿದೆ. ಗಮನಾರ್ಹ ಸಂಗತಿ ಏನೆಂದರೆ, ಆತನ ಪ್ರಾಣ ಉಳಿಯಲು ಮುಂಗಾರು ಮಳೆಯು ಕಾರಣವಾಗಿದೆ. ಈ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

                                      ಹಳಯ ಮೇಲೆಯೇ ನಿದ್ರೆ

           ಜೂ. 12 ಸಂಜೆ 6 ಗಂಟೆ ಸುಮಾರಿಗೆ ರೈಲು ಎಜುಕೋಣೆ ರೈಲು ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ಕೊಲ್ಲಂ-ಪುನಲೂರ್ ಮೆಮೂ ರೈಲಿನ ಲೋಕೋ ಪೈಲಟ್ ವ್ಯಕ್ತಿಯೊಬ್ಬ ಟ್ರ್ಯಾಕ್ ಮೇಲೆ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಲೋಕೋ ಪೈಲಟ್ ರೈಲನ್ನು ನಿಧಾನಗತಿಗೆ ತಂದು, ಅಂತಿಮವಾಗಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಸ್ಥಳೀಯರ ನೆರವಿನೊಂದಿಗೆ ಟ್ರ್ಯಾಕ್​ ಮೇಲೆ ಮಲಗಿದ್ದ ವ್ಯಕ್ತಿಯನ್ನು ಎಚ್ಚರಗೊಳಸಿ ಟ್ರ್ಯಾಕ್‌ನಿಂದ ಹೊರಗೆ ಹೋಗುವಂತೆ ಲೋಕೋ ಪೈಲಟ್ ಮಾಡಿದರು.

                ಈ ಘಟನೆಯ ನಂತರ ಪಾನಮತ್ತ ವ್ಯಕ್ತಿಯನ್ನು ಎಜುಕೋಣೆ ಪೊಲೀಸರ ಮುಂದೆ ಹಾಜರುಪಡಿಸಲಾಯಿತು. ಪೊಲೀಸರ ಪ್ರಕಾರ, ಆ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದನು ಎಂಬುದನ್ನು ಖಚಿತಪಡಿಸಿದ್ದಾರೆ ಮತ್ತು ಅವನನ್ನು ಕುಟುಂಬದ ಸದಸ್ಯರು ಮನೆಗೆ ಕರೆದೊಯ್ದರು ಎಂದು ತಿಳಿಸಿದ್ದಾರೆ.

                                        ಮುಂಗಾರು ಮಳೆಯಿಂದ ಉಳಿದ ಪ್ರಾಣ

              ಇದೇ ಸಂದರ್ಭದಲ್ಲಿ ಅಧಿಕಾರಿಗಳು ನೈಋತ್ಯ ಮುಂಗಾರು ಮಳೆ ಸಂಬಂಧಿತ ಎಚ್ಚರಿಕೆ ನೀಡಿದ ಪರಿಣಾಮವಾಗಿ ರೈಲು ಮೊದಲೇ ಕಡಿಮೆ ವೇಗದಲ್ಲಿ ಚಲಿಸುತ್ತಿತ್ತು. ಗಾಳಿಯ ರಭಸದಿಮದಾಗಿ ಮರದ ಕೊಂಬೆಗಳು ಹಳಿಗಳ ಮೇಲೆ ಬೀಳುವ ಸಾಧ್ಯತೆಯಿರುವುದರಿಂದ ಈ ಪ್ರದೇಶದಲ್ಲಿ ಎಚ್ಚರಿಕೆ ವಹಿಸಲು ಮತ್ತು ವೇಗವನ್ನು ಕಡಿಮೆ ಮಾಡಲು ಲೊಕೊ ಪೈಲಟ್‌ಗಳಿಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಈ ಕಾರಣದಿಂದಲೂ ಆ ವ್ಯಕ್ತಿ ಬದುಕುಳಿದಿದ್ದಾನೆ. ರೈಲು ಏನಾದರೂ ವೇಗದಲ್ಲಿದ್ದರೆ ಸಾವು ಸಂಭವಿಸುವುದು ಖಚಿತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries