HEALTH TIPS

ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಶೋಚನೀಯ: ಶುಶ್ರೂಷಕರ ಹುದ್ದೆ ಭರ್ತಿ ಮಾಡದ ಆರೋಗ್ಯ ಇಲಾಖೆ

           ತಿರುವನಂತಪುರ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ನರ್ಸ್ ಗಳ ಹುದ್ದೆಗಳನ್ನು ಆರೋಗ್ಯ ಇಲಾಖೆ ಭರ್ತಿ ಮಾಡಿಲ್ಲ.

         ನರ್ಸಿಂಗ್ ಆಫೀಸರ್ ಗ್ರೇಡ್ ಟು ಯಾರ್ಂಕ್ ಲಿಸ್ಟ್ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆದರೂ ನೇಮಕ ಮಾಡಲು ಸರ್ಕಾರ ಮುಂದಾಗಿಲ್ಲ. ಇಲ್ಲಿಯವರೆಗೆ ಶೇ.10ಕ್ಕಿಂತ ಕಡಿಮೆ ನೇಮಕ ಮಾಡಲಾಗಿದೆ. ಯಾರ್ಂಕ್ ಲಿಸ್ಟ್ ನಲ್ಲಿ 7000 ಮಂದಿ ಇದ್ದರೂ 479 ಮಂದಿಗೆ ಮಾತ್ರ ಕೆಲಸ ಸಿಕ್ಕಿದೆ.

             ಸಾಂಕ್ರಾಮಿಕ ರೋಗಗಳ ಹೆಚ್ಚಳದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಆದರೂ ಸÀರ್ಕಾರ ಶುಶ್ರೂಷಕರ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಗಂಭೀರವಾಗಿ ನಿರ್ಲಕ್ಷ್ಯ ವಹಿಸುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶುಶ್ರೂಷಕರಿಗೆ ಆರೋಗ್ಯ ಇಲಾಖೆ ಅವಕಾಶ ನಿರಾಕರಿಸುತ್ತಿದೆ. ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನಿಗದಿತ ಸಮಯಕ್ಕೆ ಪಿಎಸ್‍ಸಿಗೆ ವರದಿ ಮಾಡಲು ವೈದ್ಯಾಧಿಕಾರಿಗಳು ಸಿದ್ಧರಿಲ್ಲ ಎಂಬ ದೂರುಗಳೂ ಕೇಳಿಬಂದಿವೆ.

           ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಸರ್ಕಾರ ಹೊಸ ನೇಮಕಾತಿ ಮಾಡುತ್ತಿಲ್ಲ ಎಂಬ ಆರೋಪವೂ ಇದೆ. ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ ಕೇರಳದ ನರ್ಸ್‍ಗಳು ಉತ್ತಮ ಸಂಬಳ ಮತ್ತು ಅವಕಾಶಗಳನ್ನು ಅರಸಿ ವಿದೇಶಗಳಿಗೆ ಹೋಗುತ್ತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries