HEALTH TIPS

ಶಬರಿಮಲೆಯ ಮಾಳಿಗಪ್ಪುರಂ ದೇವಾಲಯದ ಮುಂಭಾಗದಲ್ಲಿ ನಿರ್ಮಾಣಗೊಳ್ಳಲಿದೆ ನವಗ್ರಹ ದೇವಾಲಯ; ಶಿಲಾನ್ಯಾಸ ಕಾರ್ಯಕ್ರಮ ಸಂಪನ್ನ

                ಪತ್ತನಂತಿಟ್ಟ: ಶಬರಿಮಲೆ ಮಾಳಿಗಪ್ಪುರ ನಲ್ಲಿ ನೂತನ ನವಗ್ರಹ ಮಂದಿರದ ಶಂಕುಸ್ಥಾಪನೆ ನೆರವೇರಿಸಲಾಯಿತು. ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ನ್ಯಾಯವಾದಿ. ಕೆ ಅನಂತ ಗೋಪನ್ ನಡೆಸಿಕೊಟ್ಟರು. ಮಾಳಿಗಪ್ಪುರ ನವಗ್ರಹ ದೇವಾಲಯ ಈವರೆಗೆ ಅಂಗಣದೊಳಗೆ ಇದ್ದಿರಲಿಲ್ಲ. ದೇವಾಲಯ ಅಂಗಣದ ಈಶಾನ್ಯ ಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಇತ್ತೀಚೆಗೆ ನಡೆದ ದೈವ ಚಿಂತನೆಯಲ್ಲಿ ಕಂಡುಬಂದಿತ್ತು. ಇದರ ಆಧಾರದ ಮೇಲೆ, ಹೊಸ ಸ್ಥಳದಲ್ಲಿ ದೇಗುಲವನ್ನು ನಿರ್ಮಿಸಲು ತೀರ್ಮಾನಿಸಿ ಶಂಕುಸ್ಥಾಪನೆ ನಡೆಸಲಾಯಿತು. 

            ಈ ಸಂದರ್ಭದಲ್ಲಿ ಶಬರಿಮಲೆ ದೇವಸ್ಥಾನದ ತಂತ್ರಿ ಕಂಠಾರರ್  ರಾಜೀವರ್, ದೇವಸ್ವಂ ಮಂಡಳಿ ಸದಸ್ಯ ಜಿ ಸುಂದರೇಶನ್, ಮುಖ್ಯ ಎಂಜಿನಿಯರ್ ಆರ್.ಅಜಿತ್ ಕುಮಾರ್, ದೇವಸ್ವಂ ಆಯುಕ್ತ ಬಿ.ಎಸ್.ಪ್ರಕಾಶ್, ಶಬರಿಮಲೆ ಮೇಲ್ಶಾಂತಿ ವಿ.ಹರಿಹರನ್ ನಂಬೂದಿರಿ ಮತ್ತು ದೇವಸ್ವಂ ಸ್ಥಪತಿ ಮನೋಜ್ ಉಪಸ್ಥಿತರಿದ್ದರು. ಮಿಥುನಮಾಸದ ಪೂಜೆಗಳಿಗೆ ಗರ್ಭಗೃಹ ತೆರೆದ ವೇಳೆ ವಿಧಿವಿಧಾನಗಳು ನಡೆದವು.

          ಐದು ದಿನಗಳ ಪೂಜೆಗಳು ಮುಗಿದ ನಂತರ ಜೂನ್ 20 ರಂದು ರಾತ್ರಿ 10 ಗಂಟೆಗೆ ಗರ್ಭಗೃಹದೆದುರು ಹರಿವರಾಸನಂ ಗಾಯನ ನಡೆಯಿತು. ಮಾಸಿಕ ಪೂಜೆಯ ಅಂಗವಾಗಿ ಮಹಾಗಣಪತಿ ಹೋಮ, ತುಪ್ಪಾಭಿಷೇಕ, ಉಷಪೂಜೆ, ಮಧ್ಯಾಹ್ನಪೂಜೆ, ಉದಯಾಸ್ತಮಯಪೂಜೆ, 25 ಕಲಶಾಭಿಷೇಕ, ಕಳಭಾಭಿಷೇಕ, ಪಡಿಪೂಜೆ, ಪುಷ್ಪಾಭಿಷೇಕ ನಡೆದು ಬಾಗಿಲು ಮುಚ್ಚಲಾಯಿತು.  ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಮಾಡುವುದರ ಜೊತೆಗೆ, ಭಕ್ತರಿಗೆ ದರ್ಶನ ಪಡೆಯಲು ಅವಕಾಶವಿದೆ, ನಿಲಯ್ಕಲ್ ಮತ್ತು ಪಂಬಾದಲ್ಲಿ ಸ್ಪಾಟ್ ಬುಕಿಂಗ್ ವ್ಯವಸ್ಥೆಯನ್ನು ಸಹ ಪರಿಚಯಿಸಲಾಗಿದೆ. ಮಿಥುನ ಮಾಸದ ಪೂಜೆಗಳಿಗಾಗಿ ಜುಲೈ 16 ರಂದು ಸಂಜೆ 5 ಗಂಟೆಗೆ ಗರ್ಬಗೃಹ ತೆರೆಯಲಿದೆ. ಜುಲೈ 16 ರಿಂದ 21 ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries