ನವದೆಹಲಿ: ಸುದೀರ್ಘ12 ಗಂಟೆ 30 ನಿಮಿಷಗಳ ಶಸ್ತ್ರಚಿಕಿತ್ಸೆ ನಡೆಸಿ ಸಯಾಮಿ ಮಕ್ಕಳನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ವೈದ್ಯರು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.
0
samarasasudhi
ಜುಲೈ 27, 2023
ನವದೆಹಲಿ: ಸುದೀರ್ಘ12 ಗಂಟೆ 30 ನಿಮಿಷಗಳ ಶಸ್ತ್ರಚಿಕಿತ್ಸೆ ನಡೆಸಿ ಸಯಾಮಿ ಮಕ್ಕಳನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ವೈದ್ಯರು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.
ಕಳೆದ ವರ್ಷ ಉತ್ತರಪ್ರದೇಶದ ಬರೇಲಿಯಲ್ಲಿ ಎದೆ ಸೇರಿ ದೇಹದ ಮೇಲ್ಬಾಗ ಪೂರ್ತಿಯಾಗಿ ಕೂಡಿಕೊಂಡ ಅವಳಿ ಹೆಣ್ಣಮಕ್ಕಳ ಜನನವಾಗಿತ್ತು.
ಗರ್ಭಧಾರಣೆಯ ನಾಲ್ಕನೇ ತಿಂಗಳಲ್ಲಿ ಮಕ್ಕಳು Thoraco-omphalopagus conjoined twins ಎಂದು ಕಂಡುಬಂದಿತ್ತು. 2022ರ ಜುಲೈ 7 ರಂದು ಈ ಮಕ್ಕಳು ಜನಿಸಿದ್ದವು. ಬಳಿಕ ಐದು ತಿಂಗಳ ಕಾಲ ಮಕ್ಕಳನ್ನು ಐಸಿಯುವಿನಲ್ಲಿ ಇರಿಸಲಾಗಿತ್ತು. ಇದೀಗ ಮಕ್ಕಳಿಗೆ 11 ತಿಂಗಳಾಗಿದ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಮಕ್ಕಳ ಶಸ್ತ್ರಚಿಕಿತ್ಸೆ ಮುಖ್ಯಸ್ಥ ಡಾ.ಮಿನು ಬಜಪೈ ತಿಳಿಸಿದ್ದಾರೆ
ಮಕ್ಕಳ ಪಕ್ಕೆಲುಬುಗಳು, ಯಕೃತ್ತು ಹಾಗೂ ಎರಡೂ ಹೃದಯಗಳು ಒಂದಕ್ಕೊಂದು ತುಂಬಾ ಹತ್ತಿರವಾಗಿದ್ದವು. 9 ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ಮುಗಿದಿತ್ತು, ಆದರೆ ಅರಿವಳಿಕೆ ಪ್ರಕ್ರಿಯೆಗೆ 3 ತಾಸು ಬೇಕಾಯಿತು. ಹೀಗಾಗಿ ಪೂರ್ಣ ಪ್ರಮಾಣದ ಪ್ರಕ್ರಿಯೆ ಮುಗಿಯಲು 12 ಗಂಟೆ 30 ನಿಮಿಷ ಕಾಲ ಹಿಡಿಯಿತು ಎಂದು ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಪ್ರಬುದ್ ಗೋಯೆಲ್ ಮಾಹಿತಿ ನೀಡಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಮಕ್ಕಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಅಸ್ಪತ್ರೆಯಲ್ಲಿ ಆಚರಿಸಿಲಾಗಿದೆ.