ಕೊಟ್ಟಾಯಂ: ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪಾರ್ಥಿವ ಶರೀರವನ್ನು ಹೊತ್ತ ಅಂತ್ಯಕ್ರಿಯೆ ಮೆರವಣಿಗೆಯು ಶೋಕಗೀತೆಗಳು ಮತ್ತು ಘೋಷಗಳೊಂದಿಗೆ ಸೇಂಟ್ ಜಾರ್ಜ್ ಗ್ರೇಟ್ ಚರ್ಚ್ ಗೆ ತಲಪಿ ಅಂತ್ಯಕ್ರಿಯೆ , ದಫನಗಳು ನಡೆಯಿತು.
ಕರೋಟ್ ವಳ್ಳಕಲ್‍ನಲ್ಲಿರುವ ಮನೆಯಲ್ಲಿ ಅಂತಿಮ ವಿಧಿವಿಧಾನದ ನಂತರ, ಪುತ್ತುಪಲ್ಲಿ ಕಾವಳದಲ್ಲಿ ಹೊಸದಾಗಿ ನಿರ್ಮಿಸಲಾದ ಮನೆಯಲ್ಲಿ ಸಾರ್ವಜನಿಕ ದರ್ಶನವನ್ನು ಮುಗಿಸಿದ ನಂತರ ಮೃತದೇಹವನ್ನು ಹೊತ್ತ ಅಂತ್ಯಕ್ರಿಯೆಯ ಮೆರವಣಿಗೆ ಚರ್ಚ್ ತಲುಪಿತು. ಕ್ಯಾಥೋಲಿಕ್ ಬಾವಾ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆಯ ವಿಧಿಗಳು ನಡೆಯಿತೆಂದು ವರದಿಯಾಗಿದೆ. 20 ಬಿಷಪ್‍ಗಳು ಮತ್ತು ನೂರಾರು ಪಾದ್ರಿಗಳು ಭಾಗವಹಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತಿತರರು ಪುದುಪಲ್ಲಿ ತಲುಪಿದ್ದಾರೆ. ಅಚ್ಚುಮೆಚ್ಚಿನ ನಾಯಕನ ದರ್ಶನ ಪಡೆಯಲು ಚರ್ಚ್‍ನಲ್ಲಿ ಸಾವಿರಾರು ಜನರು ಸೇರಿದ್ದರು. ಕಾಂಗ್ರೆಸ್ ಮುಖಂಡರಾದ ಕೆ.ಸುಧಾಕರನ್, ಎ.ಕೆ.ಆಂಟನಿ, ವಿ.ಡಿ.ಸತೀಶನ್, ರಮೇಶ್ ಚೆನ್ನಿತ್ತಲ ಸೇರಿದಂತೆ ಸಚಿವರು, ಜೋಸ್ ಕೆ ಮಣಿ, ಕುನ್ಹಾಲಿಕುಟ್ಟಿ ಸೇರಿದಂತೆ ಪ್ರಮುಖರು ಚರ್ಚ್ ನಲ್ಲಿದ್ದರು.





