ತಿರುವನಂತಪುರಂ: ಆಲಪ್ಪುಳದ ಕುಟ್ಟನಾಡ್ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ತುರ್ತು ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆ ವಿಶೇಷ ವ್ಯವಸ್ಥೆಗಳನ್ನು ಸಿದ್ಧಪಡಿಸಿದೆ.
3 ಮೊಬೈಲ್ ಪ್ಲೋಟಿಂಗ್(ತೇಲುವ) ಡಿಸ್ಪೆನ್ಸರಿಗಳು, 24 ಗಂಟೆಗಳ ನೀರಿನ ಆಂಬ್ಯುಲೆನ್ಸ್ ಮತ್ತು ಭೂ ಆಧಾರಿತ ಮೊಬೈಲ್ ಘಟಕವನ್ನು ಸ್ಥಾಪಿಸಲಾಗಿದೆ. ಅವು ಶುಕ್ರವಾರದಿಂದ ಕಾರ್ಯಾರಂಭ ಮಾಡಲಿವೆ. ಈ ವ್ಯವಸ್ಥೆಗಳು ಜನರಿಗೆ ತುಂಬಾ ಸಹಕಾರಿಯಾಗಲಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಅವರ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಜಿಲ್ಲಾ ವೈದ್ಯಕೀಯ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಪ್ರಾರಂಭಿಸಲಾಗಿದೆ. ಸಂಚಾರಿ ಘಟಕಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಆರೋಗ್ಯ ಇಲಾಖೆಯಡಿ ಮೊಬೈಲ್ ಪ್ಲೋಟಿಂಗ್ ಡಿಸ್ಪೆನ್ಸರಿಗಳನ್ನು ದೋಣಿಗಳಲ್ಲಿ ಸ್ಥಾಪಿಸಲಾಗಿದೆ. ಕುಟ್ಟನಾಡಿನ ವಿವಿಧ ಭಾಗಗಳಿಗೆ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಸೇವೆ ಲಭ್ಯವಿದೆ. ಚಂಪಕುಳಂ, ಕಾವಳಂ ಮತ್ತು ಕುಪ್ಪಾಪುರಂ ಆರೋಗ್ಯ ಸಂಸ್ಥೆಗಳ ನಿಯಂತ್ರಣದಲ್ಲಿರುವ ಎಲ್ಲಾ ಮೂರು ತೇಲುವ ಔಷಧಾಲಯಗಳಲ್ಲಿ ವೈದ್ಯರು, ದಾದಿಯರು ಮತ್ತು ಫಾರ್ಮಾಸಿಸ್ಟ್‍ಗಳ ಸೇವೆ ಲಭ್ಯವಿದೆ. ಜ್ವರ ಮತ್ತು ಇತರ ಕಾಯಿಲೆಗಳಿಗೆ ಮೂಲಭೂತ ಚಿಕಿತ್ಸೆಯ ಹೊರತಾಗಿ, ಈ ತೇಲುವ ಔಷಧಾಲಯಗಳು ಜೀವನಶೈಲಿ ರೋಗಗಳಿಗೆ ಚಿಕಿತ್ಸೆ ಮತ್ತು ಔಷಧಿಗಳಂತಹ ಸೇವೆಗಳನ್ನು ಸಹ ನೀಡುತ್ತವೆ. ಫೆÇ್ಲೀಟಿಂಗ್ ಡಿಸ್ಪೆನ್ಸರಿಗಳ ಮೂಲಕವೂ ರೋಗ ತಡೆ ಜಾಗೃತಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಇರುವ ಸಂಚಾರಿ ಘಟಕದಲ್ಲಿ ವೈದ್ಯರು, ದಾದಿಯರು ಮೊದಲಾದವರು ಇರುತ್ತಾರೆ. ಜಲಸಾರಿಗೆ ಇಲಾಖೆಯ ಸಹಯೋಗದಲ್ಲಿ ಜಲ ಆಂಬ್ಯುಲೆನ್ಸ್‍ನಲ್ಲಿ ಆಮ್ಲಜನಕ ಸೇರಿದಂತೆ ಸೇವೆಗಳನ್ನು ಒದಗಿಸಲಾಗಿದೆ. ಡಿ.ಎಂ.ಓ. ನಿಯಂತ್ರಣ ಕೊಠಡಿ ಸಂಖ್ಯೆ 0477 2961652.





