HEALTH TIPS

ಫ್ರಾನ್ಸ್‌ನಿಂದ 26 ರಫೇಲ್ ಜೆಟ್ ಖರೀದಿಗೆ ಆರಂಭಿಕ ಅನುಮೋದನೆ: ವರದಿ

              ವದೆಹಲಿ: ಫ್ರಾನ್ಸ್‌ ದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಭಾರತೀಯ ನೌಕಾಪಡೆಗೆ 26 ರಫೇಲ್ ಯುದ್ಧ ವಿಮಾನಗಳು ಮತ್ತು 3 ಸ್ಕಾರ್ಪಿಯನ್ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಖರೀದಿಗೆ ರಕ್ಷಣಾ ಸಚಿವಾಲಯವು ಆರಂಭಿಕ ಅನುಮೋದನೆ ನೀಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

                 ಇಂಡೊ-ಪೆಸಿಫಿಕ್ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಪಾಶ್ಚಿಮಾತ್ಯ ರಾಷ್ಟ್ರಗಳ ಪೈಕಿ ಭಾರತದ ಅತ್ಯಂತ ಹಳೆಯ ರಾಜತಾಂತ್ರಿಕ ಪಾಲುದಾರ ದೇಶ ಫ್ರಾನ್ಸ್ ಜೊತೆ ಉನ್ನತ ರಕ್ಷಣಾ ಒಪ್ಪಂದದ ನಿರೀಕ್ಷೆ ಇದೆ.

                  ನಾಲ್ಕು ತರಬೇತುದಾರರು ಸೇರಿದಂತೆ 26 ​​ರಫೇಲ್ ಫೈಟರ್ ಜೆಟ್‌ಗಳ ಖರೀದಿ ಮತ್ತು ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ತಯಾರಿಸುವ ಮೂರು ಸ್ಕಾರ್ಪಿಯನ್ ದರ್ಜೆಯ ಜಲಾಂತರ್ಗಾಮಿ ನೌಕೆಗಳಿಗೆ ಫ್ರಾನ್ಸ್‌ನ ನೌಕಾಪಡೆಯೊಂದಿಗೆ ಒಪ್ಪಂದವಾಗಿದೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

               ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಗಾಗಿ ಖರೀದಿಗೆ ಉದ್ದೇಶಿಸಲಾಗಿರುವ ರಫೇಲ್ ಜೆಟ್‌ಗಳು ಕಳೆದ ವರ್ಷ ನಡೆದ ಪರೀಕ್ಷೆಗಳಲ್ಲಿ ಅಮೆರಿಕದ SuperhornetF18s ಅನ್ನು ಮೀರಿಸಿವೆ.

                   ಒಪ್ಪಂದದ ಮೌಲ್ಯದ ವಿವರಗಳು ಇನ್ನಷ್ಟೆ ತಿಳಿದುಬರಬೇಕಿದೆ.

                 ಭಾರತವು ನಾಲ್ಕು ದಶಕಗಳಿಂದ ಫ್ರೆಂಚ್ ಯುದ್ಧ ವಿಮಾನಗಳನ್ನು ಅವಲಂಬಿಸಿದೆ. 2015ರಲ್ಲಿ ರಫೇಲ್ ಖರೀದಿಗೂ ಮೊದಲು 1980ರ ದಶಕದಲ್ಲಿ ಮಿರಾಜ್ ಜೆಟ್‌ಗಳನ್ನು ಖರೀದಿಸಿತ್ತು. ವಾಯುಪಡೆಯಲ್ಲಿ ಈಗಲೂ ಇವುಗಳು ಬಳಕೆಯಲ್ಲಿವೆ.

                2005ರಲ್ಲಿ ಭಾರತವು ಫ್ರಾನ್ಸ್‌ನಿಂದ ಆರು ಸ್ಕಾರ್ಪಿಯನ್ ದರ್ಜೆಯ ಡೀಸೆಲ್ ಜಲಾಂತರ್ಗಾಮಿ ನೌಕೆಗಳನ್ನು ₹18,800 ಕೋಟಿಗೆ ($2.29 ಬಿಲಿಯನ್) ಖರೀದಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries