HEALTH TIPS

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಆಫರ್! ವಾಯುಸೇನೆಯಲ್ಲಿ 3,500 ಅಗ್ನಿವೀರರ ನೇಮಕಕ್ಕೆ ಅರ್ಜಿ ಆಹ್ವಾನ

           ವದೆಹಲಿ: ಭಾರತೀಯ ವಾಯುಪಡೆ ಇದೀಗ 3,500 ಅಗ್ನಿವೀರರನ್ನು ಆಗಿ ಐಎಎಫ್ ಅಗ್ನಿವೀರವಾಯು ಆಗಿ ನೇಮಕ ಮಾಡಲು 2023ರ ಅಕ್ಟೋಬರ್ 13ರಿಂದ ಆಯ್ಕೆ ಪರೀಕ್ಷೆಗೆ ಆನ್​ಲೈನ್ ಅರ್ಜಿಯನ್ನು ಆಹ್ವಾನಿಸಿದೆ. ಇಲ್ಲಿ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

           ಆನ್​ಲೈನ್ ನೋಂದಣಿ ಜುಲೈ 27ರಂದು ಪ್ರಾರಂಭವಾಗಿ ಆಗಸ್ಟ್ 17ರಂದು ಕೊನೆಗೊಳ್ಳಲಿದೆ. 2023 ನೇ ಸಾಲಿಗೆ 3500 ಕ್ಕೂ ಹೆಚ್ಚು ವಾಯುಪಡೆ ಖಾಲಿ ಹುದ್ದೆಗಳನ್ನು ( 3500 Air Force Vacancies ) ಘೋಷಿಸಲಾಗಿದ್ದು, ಇದು ಮಹತ್ವಾಕಾಂಕ್ಷೆ ಇರುವ ಅಭ್ಯರ್ಥಿಗಳಿಗೆ ವಾಯುಪಡೆಯಲ್ಲಿ ಅಗ್ನಿವೀರರಾಗಿ ಸೇರಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಅಂತಹ ಖಾಲಿ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲರೂ ಈ ಸದಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಅರ್ಹತಾ ಮಾನದಂಡಗಳೇನು?

                                 ವಯೋಮಿತಿ

            27 ಜೂನ್ 2003 ಮತ್ತು 27 ಡಿಸೆಂಬರ್ 2006 ರ ನಡುವೆ ಜನಿಸಿದ ಅಭ್ಯರ್ಥಿಗಳು (ಎರಡೂ ದಿನಾಂಕಗಳನ್ನು ಒಳಗೊಂಡಂತೆ) ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ

ಅಭ್ಯರ್ಥಿಯು ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತಗಳನ್ನು ತೇರ್ಗಡೆಯಾದರೆ, ದಾಖಲಾತಿಯ ದಿನಾಂಕದಂದು ಗರಿಷ್ಠ ವಯಸ್ಸಿನ ಮಿತಿ ಹೀಗಿರಬೇಕು 21 ವರ್ಷ.

ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ಅಗ್ನಿವೀರವಾಯು ಎಂದು ನೋಂದಾಯಿಸಲು ಅರ್ಹರೆಂದು ಪರಿಗಣಿಸಲಾಗುತ್ತದೆ. ಅವರು ನಾಲ್ಕು ವರ್ಷಗಳ ನಿರ್ದಿಷ್ಟ ಅವಧಿಯವರೆಗೆ ಮುದುವೆಯಾಗದಿರಲು ಬದ್ಧರಾಗಿರಬೇಕು.

              'ಈ ಅವಧಿಯಲ್ಲಿ ಮದುವೆಯಾಗುವ ಅವೀರವಾಯುದನ್ನು ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ. ಇದಲ್ಲದೆ, ಅವಿವಾಹಿತ ಅಗ್ನಿವೀರವಾಯು ಮಾತ್ರ ಏರ್ಮ್ಯಾನ್ ಆಗಿ ಸಾಮಾನ್ಯ ಈಡರ್​​ನಲ್ಲಿ ಆಯ್ಕೆಯಾಗಲು ಅರ್ಹರಾಗಿರುತ್ತಾರೆ. ನಾಲ್ಕು ವರ್ಷಗಳ ಅವಧಿಯಲ್ಲಿ ಮಹಿಳಾ ಅಭ್ಯರ್ಥಿಗಳು ಗರ್ಭಿಣಿಯಾಗುವುದಿಲ್ಲ ಎಂದು ಬರೆದುಕೊಡಬೇಕಿದೆ. ಎಲ್ಲಾದರೂ ಮಹಿಳೆಯರು ಗರ್ಭಧಾರಣೆ ಮಾಡಿದಲ್ಲಿ ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ.

             ಗರ್ಭಧಾರಣೆ ಮಾಡಿದಲ್ಲಿ ಅವರನ್ನು ರೆಗ್ಯುಲರ್ ಕೇಡರ್​ಗೆ ಆಯ್ಕೆ ಮಾಡಲಾಗುವುದಿಲ್ಲ. ದಾಖಲಾತಿಯ ಸಮಯದಲ್ಲಿ, ಅಭ್ಯರ್ಥಿಗಳು ಮೇಲಿನ ಷರತ್ತುಗಳನ್ನು ಒಪ್ಪಿಕೊಂಡು ಸ್ವಯಂಪ್ರೇರಿತರಾಗಿ ಮುಚ್ಚಳಿಕೆಗೆ ಸಹಿ ಮಾಡಬೇಕಾಗುತ್ತದೆ.

                                            ಅಗತ್ಯ ಶೈಕ್ಷಣಿಕ ಅರ್ಹತೆಗಳೇನು?

                   ( ಎ) ವಿಜ್ಞಾನ ವಿಷಯಗಳನ್ನು ಓದಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ನೊಂದಿಗೆ ಇಂಟರ್ ಮೀಡಿಯೇಟ್ / 10 + 2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ, ಇಂಗ್ಲಿಷ್​ನಲ್ಲಿ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಥವಾ

ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾನ್ಯತೆ ಪಡೆದ ಪಾಲಿಟೆಕ್ನಿಕ್‌ ಸಂಸ್ಥೆಯಿಂದ ಎಂಜಿನಿಯರಿಂಗ್​ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್‌ (ಮೆಕ್ಯಾನಿಕಲ್ / ಎಲೆಕ್ನಿಕಲ್ / ಎಲೆಕ್ಟ್ರಾನಿಕ್ಸ್ / ಆಟೋಮೊಬೈಲ್ / ಕಂಪ್ಯೂಟರ್ ಸೈನ್ಸ್ / ಇನ್ಸುಮೆಂಟೇಶನ್ ಟೆಕ್ನಾಲಜಿ / ಇನ್ದ್ರರ್ಮೇಷನ್ ಟೆಕ್ನಾಲಜಿ) ಅನ್ನು ಒಟ್ಟು 50 ಪ್ರತಿಶತ ಅಂಕಗಳೊಂದಿಗೆ ಮತ್ತು ಡಿಪ್ಲೊಮಾ ಕೋರ್ಸ್ನಲ್ಲಿ ಇಂಗ್ಲಿಷಲ್ಲಿ 50 ಪ್ರತಿಶತ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು (ಅಥವಾ ಡಿಪ್ಲೊಮಾ ಕೋರ್ಸ್​ನಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದಿದ್ದರೆ ಇಂಟರ್ಮೀಡಿಯೆಟ್ / ಮೆಟ್ರಿಕ್ಯುಲೇಷನ್ನಲ್ಲಿ ಇಂಗ್ಲೀಷ್ ಪರೀಕ್ಷೆಯಲ್ಲಿ ಶೇಕಡ 50ರಷ್ಟು ಅಂಕ ಹೊಂದಿರಬೇಕು).

ಅಥವಾ

ವೃತ್ತಿಪರವಲ್ಲದ ವಿಷಯದೊಂದಿಗೆ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಉತ್ತೀರ್ಣರಾಗಿರಬೇಕು. ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಭೌತಶಾಸ್ತ್ರ ಮತ್ತು ಗಣಿತವನ್ನು ಒಟ್ಟು 50 ಪ್ರತಿಶತ ಅಂಕಗಳೊಂದಿಗೆ ಮತ್ತು ವೃತ್ತಿಪರ ಕೋರ್ಸ್​ನಲ್ಲಿ ಇಂಗ್ಲಿಷ್ಟಲ್ಲಿ 50 ಪ್ರತಿಶತ ಅಂಕಗಳೊಂದಿಗೆ (ಅಥವಾ ವೃತ್ತಿಪರ ಕೋರ್ಸ್​ನಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದಿದ್ದರೆ ಇಂಟರ್ಮೀಡಿಯೆಟ್ / ಮೆಟ್ರಿಕ್ಯುಲೇಷನ್​ನಲ್ಲಿ) ಶೇಕಡಾ 50 ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

(ಬಿ) ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಯಾವುದೇ ಸ್ಟ್ರೀಮ್ / ವಿಷಯಗಳಲ್ಲಿ ಇಂಟರ್ ಮೀಡಿಯೇಟ್ / 10+2 / ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಮತ್ತು ಇಂಗ್ಲಿಷ್ ನಲ್ಲಿ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಥವಾ

ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಅನ್ನು ಒಟ್ಟು ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಮತ್ತು ವೃತ್ತಿಪರ ಕೋರ್ಸ್​ನಲ್ಲಿ ಇಂಗ್ಲಿಷ್​ ವಿಷಯದಲ್ಲಿ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು (ಅಥವಾ ವೃತ್ತಿಪರ ಕೋರ್ಸ್​ನಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದಿದ್ದರೆ ಇಂಟರ್ಮೀಡಿಯೆಟ್ / ಮೆಟ್ರಿಕ್ಯುಲೇಷನ್ನಲ್ಲಿ ಶೇಕಡ 50 ಪ್ರತಿಷತದೊಂದಿಗೆ ಉತ್ತೀರ್ಣರಾಗಿರಬೇಕು).

ಸೂಚನೆಗಳು:

ವಿಜ್ಞಾನ ವಿಷಯಗಳ ಪರೀಕ್ಷೆಗೆ (ಇಂಟರ್ಮೀಡಿಯೇಟ್ / 10 + 2 / ಎಂಜಿನಿಯರಿಂಗ್ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್‌ ಅಥವಾ ಭೌತಶಾಸ್ತ್ರ ಮತ್ತು ಗಣಿತದ ವೃತ್ತಿಪರವಲ್ಲದ ವಿಷಯಗಳೊಂದಿಗೆ ಎರಡು ವರ್ಷಗಳ ವೃತ್ತಿಪರ ಕೋರ್ಸ್‌ ಸೇರಿದಂತೆ) ಅರ್ಹತೆ ಪಡೆದ ಅಭ್ಯರ್ಥಿಗಳು ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳಿಗೆ ಅರ್ಹರಾಗಿರುತ್ತಾರೆ. ಅನೈನ್ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡುವಾಗ ವಿಜ್ಞಾನ ವಿಷಯಗಳು ಮತ್ತು ವಿಜ್ಞಾನ

ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳಿಗೆ ಒಂದೇ ಬಾರಿಗೆ ಹಾಜರಾಗುವ ಆಯ್ಕೆಯನ್ನು ನೀಡಲಾಗುವುದು. ಸೂಚನೆ - 2: ನೋಂದಣಿ ದಿನಾಂಕದಂದು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

10+2/ಇಂಟರ್ ಮೀಡಿಯೇಟ್/ತತ್ಸಮಾನ ಪರೀಕ್ಷೆ/ಮೂರು ವರ್ಷದ ಡಿಪ್ಲೊಮಾ ಕೋರ್ಸ್‌/ಎರಡು ವರ್ಷದ ವೃತ್ತಿಪರ ಕೋರ್ಸ್ ಅಥವಾ ಸಂಬಂಧಪಟ್ಟ ಶಿಕ್ಷಣ ಮಂಡಳಿ/ಪಾಲಿಟೆಕ್ನಿಕ್ ಸಂಸ್ಥೆಯ ನಿಯಮಗಳ ಪ್ರಕಾರ ಲೆಕ್ಕಹಾಕಲಾದ ದಶಮಾಂಶಕ್ಕೆ ಮುಂಚಿನ ನಿಖರವಾದ ಒಟ್ಟು ಶೇಕಡಾವಾರು ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ (ಉದಾಹರಣೆಗೆ 49.99 ಪ್ರತಿಶತವನ್ನು 49 ಪ್ರತಿಶತವೆಂದು ತೆಗೆದುಕೊಳ್ಳಬೇಕು ಮತ್ತು 50 ಪ್ರತಿಶತಕ್ಕೆ ಮಿತಿಗೊಳಿಸಬಾರದು).


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries