ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾಕ್ಷರತಾ ಮಿಷನ್ ವಯೋವೃದ್ಧರಿಗಾಗಿ ನಡೆಸಿದ ಹೈಯರ್ ಸೆಕೆಂಡರಿ ಸಮಾಂತರ ಪರೀಕ್ಷೆಯಲ್ಲಿ ಶೇಕಡಾ 80.57 ಮಂದಿ ಉತ್ತೀರ್ಣರಾಗುವುದರೊಂದಿಗೆ ಜಿಲ್ಲೆ ಉತ್ತಮ ಸಾಧನೆ ತೋರಿಸಿದೆ. ಜಿಲ್ಲೆಯ ಏಳು ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಮೇ 20 ರಿಂದ 25 ರವರೆಗೆ ನಡೆಸಿದ ಪ್ರೌಢಶಾಲಾ ಸಮಾಂತರ ಪರೀಕ್ಷೆ ನಡೆಸಲಾಗಿತ್ತು. ಜಿಲ್ಲೆಯಲ್ಲಿ ಪರೀಕ್ಷೆ ಬರೆದ 278 ಅಭ್ಯರ್ಥಿಗಳಲ್ಲಿ 224 ಮಂದಿ ಉತ್ತೀರ್ಣರಾಗಿದ್ದಾರೆ.
ಮಲಯಾಳಂ ವಿಭಾಗದಲ್ಲಿ 182 ಹಾಗೂ ಕನ್ನಡ ವಿಭಾಗದಲ್ಲಿ 42 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಾನವಿಕ ವಿಭಾಗದಲ್ಲಿ 201 ಹಾಗೂ ವಾಣಿಜ್ಯ ವಿಭಾಗದಲ್ಲಿ 23 ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲಾ ಸಾಕ್ಷರತಾ ಮಿಷನ್‍ನ ಆಶ್ರಯದಲ್ಲಿ ವಿಜೇತರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗುತ್ತಿದೆ.




