ಆಮಸ್ಟರ್ಡಾಂ: ಸಿಂಧೂ ನದಿ ಕಣಿವೆಯ ನೀರು ಬಳಕೆ ಸಂಬಂಧ ಪಾಕಿಸ್ತಾನ ನೀಡಿದ್ದ ದೂರು ಸಂಬಂಧ ಭಾರತ ಎತ್ತಿದ್ದ ಆಕ್ಷೇಪಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯ ತಿರಸ್ಕಾರ ಮಾಡಿದೆ.
ಸಿಂಧೂ ಕಣಿವೆಯಲ್ಲಿ ಜಲ ವಿದ್ಯುತ್ ಯೋಜನೆ: ಅಂ.ರಾ ನ್ಯಾಯಾಲಯದಲ್ಲಿ ಭಾರತಕ್ಕೆ ಹಿನ್ನಡೆ
0
ಜುಲೈ 07, 2023
Tags
0
samarasasudhi
ಜುಲೈ 07, 2023
ಆಮಸ್ಟರ್ಡಾಂ: ಸಿಂಧೂ ನದಿ ಕಣಿವೆಯ ನೀರು ಬಳಕೆ ಸಂಬಂಧ ಪಾಕಿಸ್ತಾನ ನೀಡಿದ್ದ ದೂರು ಸಂಬಂಧ ಭಾರತ ಎತ್ತಿದ್ದ ಆಕ್ಷೇಪಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯ ತಿರಸ್ಕಾರ ಮಾಡಿದೆ.
ಸಿಂಧೂ ನದಿ ನೀರು ಹಂಚಿಕೆ ಸಂಬಂಧ ಉಭಯ ರಾಷ್ಟ್ರಗಳ ಮಧ್ಯೆ ಹಲವು ದಶಕಗಳಿಂದ ತಕರಾರು ಇದೆ.
ಸಿಂಧೂ ನದಿ ಕಣಿವೆಯಲ್ಲಿ ಭಾರತ ಕೈಗೊಂಡಿರುವ ಜಲವಿದ್ಯುತ್ ಯೋಜನೆ ಬಗ್ಗೆ ಪಾಕಿಸ್ತಾನ ಅಪಸ್ವರ ಎತ್ತಿತ್ತು. ಭಾರತದ ಈ ಯೋಜನೆಯಿಂದ ಸದ್ಯ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿತ್ತು.
ಸಿಂಧೂ ನದಿಯ ನೀರನ್ನೇ ಪಾಕಿಸ್ತಾನದ ಶೇ 80 ರಷ್ಟು ಕೃಷಿ ಭೂಮಿ ಅವಲಂಬಿಸಿಕೊಂಡಿದೆ.
ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ನೀಡಿದ್ದ ಪಾಕಿಸ್ತಾನ ಭಾರತದ ಯೋಜನೆಯಿಂದ ತೊಂದರೆಯಾಗಲಿದೆ. ಹೀಗಾಗಿ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ (ಪಿಸಿಎ) ಮಧ್ಯಸ್ಥಿಕೆ ವಹಿಸಬೇಕು ಎಂದು ಪಾಕಿಸ್ತಾನ ಮನವಿ ಮಾಡಿತ್ತು. ಹೀಗಾಗಿ ವಿಶ್ವಬ್ಯಾಂಕ್ ಸಿಂಧೂ ನದಿ ಒಪ್ಪಂದದ ಅಧ್ಯಯನಕ್ಕೆ ತಟಸ್ಥ ತಜ್ಞರ ಸಮಿತಿಯನ್ನು ರಚಿಸಿತ್ತು.
ಹೇಗ್‌ನಲ್ಲಿ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ ನಡೆಸುತ್ತಿದ್ದ ಕಲಾಪಗಳನ್ನು ಭಾರತ ಬಹಿಷ್ಕಾರ ಮಾಡಿತ್ತು. ಅಲ್ಲದೇ ಕೋರ್ಟ್‌ನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎತ್ತಿತ್ತು.
ಇದೀಗ ಭಾರತ ಎತ್ತಿರುವ ಆಕ್ಷೇಪಣೆಗಳನ್ನು ತಿರಸ್ಕರಿಸಿರುವ ನ್ಯಾಯಾಲಯ, ಪಾಕಿಸ್ತಾನದ ವಿನಂತಿಯಲ್ಲಿ ಸೂಚಿಸಲಾದ ವಿವಾದಗಳನ್ನು ಪರಿಗಣಿಸಲು ಮತ್ತು ಅದರ ಬಗ್ಗೆ ನಿರ್ಧರಿಸಲು ನ್ಯಾಯಾಲಯವು ಸಮರ್ಥವಾಗಿದೆ ಎಂದು ಹೇಳಿದೆ.