ತಿರುವನಂತಪುರಂ: ರಾಜ್ಯದಲ್ಲಿ ಜ್ವರ ಮತ್ತು ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ. ಆರೋಗ್ಯ ಇಲಾಖೆಯ ಪ್ರಕಾರ ಕೇರಳದಲ್ಲಿ 138 ಡೆಂಗ್ಯೂ ಪೀಡಿತ ಪ್ರದೇಶಗಳಿವೆ.
ಈ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ನಿನ್ನೆಯμÉ್ಟೀ ಜ್ವರದಿಂದ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ತಿಂಗಳೊಂದರಲ್ಲೇ 86 ಮಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ.
ಡೆಂಗ್ಯೂಗೆ ಕಾರಣವಾಗುವ ಈಡಿಸ್ ಸೊಳ್ಳೆ ಇರುವ ಪ್ರದೇಶಗಳನ್ನು ಆರೋಗ್ಯ ಇಲಾಖೆ ವರ್ಗೀಕರಿಸಿದೆ. ಕೋಯಿಕ್ಕೋಡ್ ಮತ್ತು ಕೊಲ್ಲಂ ಜಿಲ್ಲೆಗಳು ಅತಿ ಹೆಚ್ಚು ಹಾಟ್‍ಸ್ಪಾಟ್‍ಗಳನ್ನು ಹೊಂದಿವೆ. ಎರಡೂ ಜಿಲ್ಲೆಗಳಲ್ಲಿ ತಲಾ 20 ಹಾಟ್‍ಸ್ಪಾಟ್‍ಗಳಿವೆ. ತಿರುವನಂತಪುರಂನಲ್ಲಿ 12 ಹಾಟ್ ಸ್ಪಾಟ್‍ಗಳಿವೆ.
ಸದ್ಯ ರಾಜ್ಯದಲ್ಲಿ ಟೈಪ್ 2 ಡೆಂಗ್ಯೂ ವೈರಸ್ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಿನ್ನೆಯμÉ್ಟೀ 12998 ಮಂದಿ ಜ್ವರಕ್ಕೆ ತುತ್ತಾಗಿದ್ದಾರೆ. ಮಳೆಯ ಆರಂಭದಿಂದ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಎರಡು ದಿನಕ್ಕಿಂತ ಹೆಚ್ಚು ಜ್ವರ ಕಾಣಿಸಿಕೊಂಡರೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆಯನ್ನೂ ನೀಡಿದೆ. ಮಕ್ಕಳು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತೀವ್ರ ಜ್ವರ ಬರಬಹುದು ಎಂಬ ಎಚ್ಚರಿಕೆಯೂ ಇದೆ.





