ತಿರುವನಂತಪುರಂ: ಕೇರಳದ ವಿಶ್ವವಿದ್ಯಾನಿಲಯಗಳಲ್ಲಿ ಮುಂದಿನ ವರ್ಷದಿಂದ ಪ್ರಾರಂಭವಾಗುವ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್‍ಗಳನ್ನು ಅವಧಿಗೆ ಮುನ್ನ ಪೂರ್ಣಗೊಳಿಸಲು ಸಹ ಅವಕಾಶವಿದೆ.
ನಾಲ್ಕು ವರ್ಷಗಳ ಆನರ್ಸ್ ಪದವಿ ಕೋರ್ಸ್ ಪೂರ್ಣಗೊಳಿಸಲು, ಒಬ್ಬ ವಿದ್ಯಾರ್ಥಿ 177 ಕ್ರೆಡಿಟ್‍ಗಳನ್ನು ಪಡೆಯಬೇಕು. ಉನ್ನತ ಶಿಕ್ಷಣ ಸುಧಾರಣಾ ಸೆಲ್ ಸಂಶೋಧನಾ ಅಧಿಕಾರಿ ಡಾ.ವಿ. ಶೆಫೀಕ್ ಈ ಬಗ್ಗೆ ತಿಳಿಸಿರುವರು.
ಸಮಯದ ಮಿತಿಗಿಂತ ಕ್ರೆಡಿಟ್ ಗೆ ಪ್ರಾಮುಖ್ಯತೆ ನೀಡಲು ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ನಾಲ್ಕು ವರ್ಷಗಳ ಕೋರ್ಸ್‍ಗೆ ದಾಖಲಾಗುವ ವಿದ್ಯಾರ್ಥಿಯು ಪ್ರಸ್ತುತ ವ್ಯವಸ್ಥೆಯಲ್ಲಿ ಮೂರನೇ ವರ್ಷದಲ್ಲಿ 133 ಕ್ರೆಡಿಟ್‍ಗಳೊಂದಿಗೆ ಪದವಿ ಪಡೆಯಲು ಅವಕಾಶವಿದೆ. ಹೆಚ್ಚಿನ ಸಂಶೋಧನಾ ಅಧ್ಯಯನವನ್ನು ಮುಂದುವರಿಸಲು ಬಯಸುವವರು ನಾಲ್ಕನೇ ವರ್ಷದ ಅಧ್ಯಯನದಲ್ಲಿ 177 ಕ್ರೆಡಿಟ್‍ಗಳನ್ನು ಪೂರ್ಣಗೊಳಿಸಿದ ನಂತರ ಗೌರವ ಪದವಿಯನ್ನು ಪಡೆಯಬಹುದು. ಎನ್‍ಸಿಸಿ ಮತ್ತು ಎನ್‍ಎಸ್‍ಎಸ್ ಚಟುವಟಿಕೆಗಳು ಸಹ ಕೋರ್ಸ್‍ನ ಭಾಗವಾಗಿರುತ್ತವೆ. ಇವುಗಳಲ್ಲಿ ಆರು ಗಂಟೆಗಳ ಕಾಲ ವ್ಯಯಮಾಡುವ ಮೂಲಕ ಒಂದು ಕ್ರೆಡಿಟ್ ಅನ್ನು ಗಳಿಸಬಹುದು.
ಗಳಿಸಬೇಕಾದ ಒಟ್ಟು ಕ್ರೆಡಿಟ್‍ನ ಅರ್ಧದಷ್ಟು ಭಾಗವನ್ನು ವಿದ್ಯಾರ್ಥಿಯು ಪ್ರಮುಖ ಪದವಿಯನ್ನು ಗಳಿಸುವ ಯಾವುದೇ ವಿಷಯದÀಲ್ಲಿ ಗಳಿಸಲಾಗುತ್ತದೆ ಮತ್ತು ಗಳಿಸಿದ ಕ್ರೆಡಿಟ್‍ನ 25 ಪ್ರತಿಶತವನ್ನು ವಿಷಯದಲ್ಲಿ ಸಣ್ಣ ಪದವಿಯಲ್ಲಿ ಗಳಿಸಲಾಗುತ್ತದೆ. ನಾಲ್ಕು ವರ್ಷಗಳ ಕೋರ್ಸ್ ಅನ್ನು ಪ್ರಸ್ತುತಪಡಿಸಿದಾಗ ಇದು ಸಾಕಾರಗೊಳ್ಳುವುದೆಂದು ಡಾ. ಶೆಫೀಕ್ ಸೂಚಿಸಿದರು.





