ನವದೆಹಲಿ: ಇದೇ 11ಕ್ಕೆ ನಡೆಯುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸಭೆಯಲ್ಲಿ ಕ್ಯಾನ್ಸರ್ಗೆ ಬಳಸುವ 'ಡಿನುಟುಕ್ಸಿಮಾಬ್' ಔಷಧದ ಆಮದಿಗೆ ಮತ್ತು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಲಾಗುವ ವೈದ್ಯಕೀಯ ಉದ್ದೇಶದ ಆಹಾರ (ಎಫ್ಎಸ್ಎಂಪಿ)ಕ್ಕೆ ತೆರಿಗೆ ವಿನಾಯಿತಿ ಸಿಗುವ ಸಂಭವ ಇದೆ.
0
samarasasudhi
ಜುಲೈ 07, 2023
ನವದೆಹಲಿ: ಇದೇ 11ಕ್ಕೆ ನಡೆಯುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸಭೆಯಲ್ಲಿ ಕ್ಯಾನ್ಸರ್ಗೆ ಬಳಸುವ 'ಡಿನುಟುಕ್ಸಿಮಾಬ್' ಔಷಧದ ಆಮದಿಗೆ ಮತ್ತು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಲಾಗುವ ವೈದ್ಯಕೀಯ ಉದ್ದೇಶದ ಆಹಾರ (ಎಫ್ಎಸ್ಎಂಪಿ)ಕ್ಕೆ ತೆರಿಗೆ ವಿನಾಯಿತಿ ಸಿಗುವ ಸಂಭವ ಇದೆ.
ಮಲ್ಟಿಪೆಕ್ಸ್ ಸಿನಿಮಾ ಮಂದಿರಗಳಲ್ಲಿ ನೀಡಲಾಗುವ ಆಹಾರ ಅಥವಾ ಪಾನೀಯ ಗಳಿಗೆ ಶೇ. 22ರಷ್ಟು ಹೆಚ್ಚುವರಿ ಕರ (ಸೆಸ್) ವಿಧಿಸುವ ಮತ್ತು ಯುಟಿಲಿಟಿ ವಾಹನಗಳ ತೆರಿಗೆ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಂಭವ ಇದೆ. ಉಪಗ್ರಹ ಉಡಾವಣಾ ಸೇವೆಯಲ್ಲಿ ಖಾಸಗಿ ಪಾಲುದಾರರಿಗೆ ಇರುವ ಜಿಎಸ್ಟಿ ವಿನಾಯಿತಿ ಬಗ್ಗೆಯೂ ಸಭೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಅಧಿಕಾರಿಗಳನ್ನು ಒಳಗೊಂಡ ಫಿಟ್ವೆುಂಟ್ ಸಮಿತಿಯು ಕೆಲವು ಪ್ರಮುಖ ವಿಚಾರಗಳ ಬಗ್ಗೆ ಸಭೆ ಸ್ಪಷ್ಟಪಡಿಸುವುದು ಸೂಕ್ತ ಎಂದು ಸಲಹೆ ನೀಡಿದೆ ಎಂದು ಮೂಲಗಳು ಹೇಳಿವೆ. ಮಂಗಳವಾರ ನಡೆಯುವ ಸಭೆಯು ಮಂಡಳಿಯ 50ನೇ ಮೀಟಿಂಗ್ ಆಗಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷೆ ವಹಿಸಲಿದ್ದಾರೆ.