ಮುಳ್ಳೇರಿಯ: ರಬ್ಬರ್ ಹಾಲಿನ (ಲ್ಯಾಟೆಕ್ಸ್) ಬೆಲೆ ಗಗನಕ್ಕೇರಿದೆ. ಕಡಿಮೆ ಪೂರೈಕೆ ಮತ್ತು ಹೆಚ್ಚಿನ ರಪ್ತು ಬೇಡಿಕೆ ಬೆಲೆ ಏರಿಕೆಗೆ ಕಾರಣವಾಗಿದೆ. ಕೆ.ಜಿ.ಗೆ 175 ರೂ.ವರೆಗೆ ವ್ಯಾಪಾರವಾಯಿತು ಎನ್ನುತ್ತಾರೆ ವ್ಯಾಪಾರಿಗಳು. ಶುಕ್ರವಾರ ಮಾರುಕಟ್ಟೆಯಲ್ಲಿ ಒಂದು ಕೆಜಿ ಲ್ಯಾಟೆಕ್ಸ್ ಬೆಲೆ 172 ರೂ.ಇದ್ದು, ರೈತರು 165 ರೂ.ವರೆಗೆ ಪಡೆದಿರುವÀರು.
ಲ್ಯಾಟೆಕ್ಸ್ ಹಾಲಿನ ದರವೂ ಏರಿಕೆಯಾಗಿದೆ. ಕೆಜಿಗೆ 81 ರÀ್ಸ್ದರ ಲಭಿಸಿದೆ. ಮಾರ್ಚ್ ಮೊದಲ ವಾರದಿಂದ ಲ್ಯಾಟೆಕ್ಸ್ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮಾರ್ಚ್ ಮೊದಲ ವಾರದಲ್ಲಿ 115-120 ರೂ.ಧಾರಣೆಯಾಗಿತ್ತು. ನಂತರ ಪ್ರತಿದಿನ ಬೆಲೆ ಏರುತ್ತಿತ್ತು. ಎಪ್ರಿಲ್ 27ರವರೆಗೆ ಹೆಚ್ಚಿದ್ದ ಬೆಲೆ ನಂತರ ಇಳಿಕೆ ಕಂಡಿದೆ.
ನಂತರ 20 ದಿನಗಳ ನಂತರ ಮತ್ತೆ 150-152 ಮಟ್ಟದಿಂದ ಬೆಲೆ ಏರಿತು. ಇನ್ನೆರಡು ವಾರ ಬೆಲೆ ಏರಿಕೆಯಾಗುವ ಸೂಚನೆ ಮಾರುಕಟ್ಟೆಯಲ್ಲಿದೆ. ಇದೇ ವೇಳೆ ತಡವಾಗಿಯಾದರೂ ಬಿರುಸುಗೊಂಡಿರುವ ಮಳೆಯ ನಡುವೆಯೂ ತೋಟಗಳಲ್ಲಿ ಟ್ಯಾಪಿಂಗ್ ನಡೆಯುತ್ತಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹಾಲು ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಹಿಂದಿನ ತಿಂಗಳುಗಳಲ್ಲಿ ಲ್ಯಾಟೆಕ್ಸ್‍ನ ಹಿಂದಿನ ದಾಸ್ತಾನುಗಳನ್ನು ವ್ಯಾಪಾರಿಗಳು ಮತ್ತು ರೈತರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದರು. ಇದು ಲ್ಯಾಟೆಕ್ಸ್ ಕೊರತೆಗೂ ಕಾರಣವಾಯಿತು.
ಇದೇ ವೇಳೆ, ಲ್ಯಾಟೆಕ್ಸ್ ಬೆಲೆಯ ಹೆಚ್ಚಳಕ್ಕೆ ಅನುಗುಣವಾಗಿ ರಬ್ಬರ್ ಹಾಳೆಯ ಬೆಲೆಯು ಹೆಚ್ಚಿಲ್ಲ. ಶನಿವಾರ ಆರ್.ಎಸ್.ಎಸ್. ನಾಲ್ಕಕ್ಕೆ 149 ರೂ., ದಾಖಲಾಗಿದ್ದು ಐದಕ್ಕೆ 146 ರೂ.ಧಾರಣೆಯಾಗಿದೆ. ಆದರೆ, ಲ್ಯಾಟೆಕ್ಸ್ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು, ರೈತರು ಹಾಳೆ ಉತ್ಪಾದನೆಯಿಂದ ಹಿಂದೆ ಸರಿಯಬಾರದು ಎಂದು ರಬ್ಬರ್ ಮಂಡಳಿ ಸ್ಪಷ್ಟಪಡಿಸಿದೆ.




