ಕಾಸರಗೋಡು: ಚಿಕ್ಕೋಡಿ ತಾಲೂಕಿನ ಹೀರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಶ್ರೀ 108ಕಾಮಕುಮಾರ ನಂದಿಮಹಾರಾಜರ ಬರ್ಬರ ಕೊಲೆ, ಧಾರ್ಮಿಕ ವಲಯವನ್ನೇ ದಿಗ್ಭ್ರನೆಗೆ ತಳ್ಳಿದ್ದು, ಅತ್ಯಂತ ಹೇಯ ಹಾಗೂ ಖಂಡನೀಯ ಕೃತ್ಯ ಇದಾಗಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಮೀಜಿ ತಿಳಿಸಿದ್ದಾರೆ.
ಅಹಿಂಸೆಯನ್ನೇ ಪರಮೋಚ್ಛ ಧರ್ಮ ಎಂದು ಪ್ರತಿಪಾದಿಸಿ, ಇದನ್ನು ಜೀವನದಲ್ಲಿ ಅನುಷ್ಠಾನಗೊಳಿಸುತ್ತಾ ಬಂದಿರುವ ಜೈನಮತದ ಮುನಿಶ್ರೇಷ್ಠರನ್ನು ಅತ್ಯಂತ ಹಿಂಸಾತ್ಮಕವಾಗಿ ಹತ್ಯೆ ಮಾಡಿರುವುದು ದೇಶದ ಸಂತ ಪರಂಪರೆಯನ್ನು ಭೀತಿಗೆ ತಳ್ಳಿದೆ. ಇದು ಅತ್ಯಂತ ಖಂಡನೀಯ ಹಾಗೂ ದುರಾದೃಷ್ಟಕರ. ಅತ್ಯಂತ ಉತ್ಕøóಷ್ಠ ಧಾರ್ಮಿಕ ಪರಂಪರೆಯನ್ನು ಹೊಂದಿರುವ ಭಾರತ ದೇಶದಲ್ಲಿ ಇಂತಹ ತಾಲಿಬಾನಿ ಕೃತ್ಯ ಸಹಿಸಲಾಗದು. ಇಂತಹ ಹೇಯಕೃತ್ಯ ಹತ್ತಿಕ್ಕುವಲ್ಲಿ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

.jpg)
