HEALTH TIPS

ಲೋಕದ ಧ್ವನಿ ಬೆಳಕಿನ ಸಂಯೋಜನೆ ಭಗವಂತನ ಕೆಲಸ: ಸುರೇಂದ್ರನ್ ಬಿಂದು

               ಮಂಜೇಶ್ವರ: ಲೋಕದ ಧ್ವನಿ ಬೆಳಕಿನ ಸಂಯೋಜನೆ ಭಗವಂತನ ಕೆಲಸ. ಅಂತೆಯೆ ನಾವು ಆ ದೇವರಿಗೆ ಪ್ರಿಯರಾಗುವಂತೆ ದುಡಿಯೋಣ. ಕೀಳರಿಮೆ ಬಿಟ್ಟು ನಮ್ಮ ವೃತ್ತಿಯನ್ನ ನಾವು ಗೌರವಿಸುವುದರ ಮೂಲಕ ಸಮಾಜದಲ್ಲಿ ಎದ್ದು ನಿಲ್ಲೋಣ. ಆಧುನಿಕತೆಯ ಬರದಲ್ಲಿ ಮಾನವೀಯತೆ ಮರೆಯದೆ ಪರಸ್ಪರ ಸಾಮರಸ್ಯದಿಂದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸೋಣ ಎಂದು ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕÀ ಸುರೇಂದ್ರನ್ ಬಿಂದು ಹೇಳಿದರು.


            ಅವರು ಭಾನುವಾರ ಬೆಳಗ್ಗೆ ಮಂಜೇಶ್ವರ ಬೀಚ್ ಬಳಿಯ ಅಮನ್ ಕೋಟೆಜ್ ನಲ್ಲಿ ನಡೆದ ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಮಂಜೇಶ್ವರ ವಲಯ ಸಮಿತಿಯ ಕುಟುಂಬ ಸಂಗಮ - ಸೀಸನ್ 2 ಕಾರ್ಯಕ್ರಮವನ್ನು ಮಂಜೇಶ್ವರ ವಲಯ ಸಮಿತಿ ಹಿರಿಯ ಸದಸ್ಯ ಪ್ರವೀಣ್ ಎಸ್.ಡಿ.ಎಸ್ ರವರಿಗೆ ಗಿಡ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. 


           ವೃತ್ತಿಬಾಂಧವರು (ಸೌಂಡು ಪಾರ್ಟಿ) ಲಕ್ಷಾಧೀಶ್ವರರು. ಇವರಿಗೆ ಹಣದ ಅವಶ್ಯಕತೆ ಇರುವುದಿಲ್ಲ ಎಂಬ ತಪ್ಪು ಭಾವನೆಯಿಂದ ಕಳೆದ ಕರೋನಾ ಸಂಕಷ್ಟದ ಸಂದರ್ಭ ಸರ್ಕಾರ, ಜನಪ್ರತಿನಿಧಿಗಳು ನಮ್ಮ ಹತ್ತಿರ ಸುಳಿಯಲಿಲ್ಲ. ಆದರೆ ನಾವು ಲಕ್ಷಗಟ್ಟಲೆ ಸಾಲ ಮಾಡಿ ಉದ್ಯಮದಲ್ಲಿ ತೊಡಗಿಸಿ ನಷ್ಟದ ದಾರಿಯಲ್ಲಿ ಸಾಗುತ್ತಿರುವ ಸತ್ಯ ಯಾರಿಗೂ ಇಂದಿನ ತನಕ ತಿಳಿಯದಿರುವುದು ಮಾತ್ರ ದುರಂತ. ಪ್ರತಿಯೊಂದು ಸಭೆ-ಸಮಾರಂಭಗಳಿಗೆ ನಾವು ಬೇಕು, ಆದರೆ ಕಷ್ಟದ ದಿನಗಳಲ್ಲಿ ಮಾತ್ರ ನಾವು ಯಾರಿಗೂ ಬೇಡ ಎನ್ನುವಂತಾಗಿದೆ ನಮ್ಮ ಸ್ಥಿತಿ ಎಂದರು.


          ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ವಿ. ಬಾಲನ್ ವಹಿಸಿದ್ದರು. ವೇದಿಕೆಯಲ್ಲಿ ಮಂಜೇಶ್ವರ ಪೋಲೀಸ್ ಠಾಣಾ ಜನಮೈತ್ರಿ ಪೋಲೀಸ್ ಮಧು ಕಾರಕಡವತ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಧ್ವನಿ ಬೆಳಕಿನವರ ಕೊಡುಗೆ ನಿರಂತರವಾಗಿದ್ದು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವಲ್ಲಿ ಅವರ ಸಹಕಾರ ಯಾರೂ ಮರೆಯುವಂತಿಲ್ಲ. ಕಲಾವಿದರಾಗಲಿ, ಜನನಾಯಕರಾಗಲಿ ವೇದಿಕೆಯಿಂದ ಜನರಿಗೆ ತಲುಪುವುದಿದ್ದರೆ ಅದು ಸೌಂಡು ಲೈಟ್ ನವರ ಸಹಕಾರದಿಂದ. ಮಳೆ ಚಳಿ ಲೆಕ್ಕಿಸದ ಅವರ ಪ್ರಾಮಾಣಿಕ ಪ್ರಯತ್ನದಿಂದ ಹಲವು ಕ್ಷೇತ್ರದಲ್ಲಿ ಇಂದು ಅದ್ಭುತ ಸಾಧನೆಯಾಗಿದೆ. ಹಳ್ಳಿ ಪಟ್ಟಣಗಳಲ್ಲಿನ ಉತ್ಸವಗಳಿಗೆ ವೈಭವದ ಮೆರುಗು ಸೃಷ್ಟಿಯಾಗಿದ್ದಲ್ಲದೆ ಪ್ರತಿ ಕಾರ್ಯಕ್ರಮದ ಯಶಸ್ಸು ಕೂಡಾ ಇವರನ್ನೇ ಅವಲಂಬಿಸಿರುತ್ತದೆ ಎಂದರು.

           ಕಾರ್ಯಕ್ರಮದಲ್ಲಿ ಸಂಘಟನೆಯ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶಿಬು, ಕೋಶಾಧಿಕಾರಿ ಎಸ್.ಎಸ್ ಹಂಝ, ಮಂಜೇಶ್ವರ ವಲಯ ಸಮಿತಿ ಗೌರವಾಧ್ಯಕ್ಷ ಬಿ.ಎಂ. ಯದುನಂದನ ಆಚಾರ್ಯ ಕಡಂಬಾರು, ಕಾರ್ಯದರ್ಶಿ ಅಬೂಬಕ್ಕರ್ ಆಸರ್, ಹಿರಿಯ ಸದಸ್ಯ ಪುಂಡರೀಕ ನಾಯ್ಕ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಈ ಸಂದರ್ಭ ತಲಪಾಡಿ ಶಾರದಾ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 96.1 ಶೇ. ಅಂಕ ಪಡೆದ ಶಿವಾನಿ, ಹಾಗೂ ಮಂಜೇಶ್ವರ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 80 ಶೇ. ಅಂಕ ಪಡೆದ ತನ್ಮಯ್ ಇವರನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಸಂಘಟನೆಯ ಮಂಜೇಶ್ವರ ವಲಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ದಿವಾಕರ್ ಪ್ರತಾಪನಗರ ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಿಸಿದರು. ಸಂಘಟನೆಯ ಮಂಜೇಶ್ವರ ವಲಯ ಗೌರವಾಧ್ಯಕ್ಷ ಬಿಎಂ ಯದುನಂದನ ಆಚಾರ್ಯ ಕಡಂಬಾರು ವಂದಿಸಿದರು. ಸಂಘಟನೆಯ ಸದಸ್ಯರಿಂದ ಉತ್ಸವಾಂಗಣಕ್ಕೆ ಮೆರವಣಿಗೆ, ಬಳಿಕ ಹಿರಿಯ ಸದಸ್ಯರಾದ ಪುಂಡರೀಕ ನಾಯ್ಕ್ ಮಂಜೇಶ್ವರ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಬಳಿಕ ವಿವಿಧ ಸ್ಪರ್ಧೆಗಳು ನಡೆಯಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries