HEALTH TIPS

ಕುಡಿದ ಮತ್ತಿನಲ್ಲಿ ಕೇರಳ ರಾಜ್ಯಪಾಲರ ಬೆಂಗಾವಲು ವಾಹನಕ್ಕೆ ಡಿಕ್ಕಿ; ಇಬ್ಬರು ಅರೆಸ್ಟ್​

                ನೋಯ್ಡಾಕುಡಿದ ಅಮಲಿನಲ್ಲಿ ವ್ಯಕ್ತಿಗಳಿಬ್ಬರು ಕೇರಳ ರಾಜ್ಯಪಾಲ ಮೊಹಮ್ಮದ್​ ಆರೀಫ್​ ಅವರ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿರುವ ಘಟನೆ ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ.

                 ಘಟನೆಯೂ ಶುಕ್ರವಾರ ರಾತ್ರಿ 10:45ರ ಸುಮಾರಿಗೆ ಸೆಕ್ಟರ್​ 76ರ ಬಳಿ ಇರುವ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

                    ಪ್ರಕರಣ ಸಂಬಂಧ ಪೊಲೀಸರು ಗೌರವ್​ ಸೋಲಂಕಿ, ಮೋನು ಕುಮಾರ್​ ಹಾಗೂ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆದಿದ್ದಾರೆ.

                                                ಪ್ರಕರಣದ ಹಿನ್ನಲೆ

                 ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನೋಯ್ಡಾದ ಹೆಚ್ಚುವರಿ ಡಿಸಿಪಿ ಶಕ್ತಿ ಮೋಹನ್​ ಅವಸ್ಥಿ ಕೇರಳದ ರಾಜ್ಯಪಾಲರಾದ ಮೊಹಮ್ಮದ್​ ಆರೀಪ್​ ಸೆಕ್ಟರ್​ 77ರಲ್ಲಿರುವ ಎಕ್ಸ್​ಪ್ರೆಸ್​ ಜೆನಿತ್​ ಸೊಸೈಟಿಯಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಸ್​ ದೆಹಲಿಯತ್ತ ಹೊರಟಿದ್ದರು. 10:45ರ ಸುಮಾರಿಗೆ ಸೆಕ್ಟರ್​ 76ರ ಬಳಿ ಇರುವ ಮೆಟ್ರೋ ನಿಲ್ದಾಣದ ಬಳಿ ಬಂಧಿತ ಆರೋಪಿಗಳಿಬ್ಬರು ಅವರ ಬೆಂಗಾವಲು ವಾಹನಕ್ಕೆ ಅಡ್ಡ ಬರಲು ಶುರು ಮಾಡಿದ್ದಾರೆ. ಬಂದಿತ ಆರೋಪಿಗಳಾದ ಗೌರವ್​ ಸೋಲಂಕಿ, ಮೋನು ಕುಮಾರ್    ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದುದ್ದನ್ನು ಗಮನಿಸಿದ ಸಿಬ್ಬಂದಿಯೂ ಅಡ್ಡ ಬಾರದಂತೆ ಎರಡು ಬಾರಿ ಕೆಂಪು ಬಾವುಟವನ್ನು ತೋರಿಸಿ ದೂರ ಇರುವಂತೆ ಹೇಳಿದ್ಧಾರೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ತಮ್ಮ ಅತಿರೇಕದ ವರ್ತನೆಯಿಂದ ಬೆಂಗಾವಲು ಪಡೆಯ ವಾಹನಕ್ಕೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

                    ಈ ವೇಳೆ ಅಲ್ಲೇ ಇದ್ದ ಸಿಬ್ಬಂದಿ ಕೂಡಲೇ ಇದನ್ನು ಗಮನಿಸಿ ಪರಿಶೀಲಿಸಿದಾಗ ಆರೋಪಿಗಳಿಬ್ಬರು ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವುದು ಕಂಡು ಬಂದಿದೆ. ಬಂಧಿತರ ವಿರುದ್ಧ ಭಾರತ ದಂಡ ಸಂಹಿತೆ(IPC Section) 34, 279, 353, 427, 504ರ ಅಡಿ ಪ್ರಕರಣ ದಾಖಲಿಸಿಕೊಂಡು FIR ಸಿದ್ದಪಡಿಸಲಾಗಿದೆ ಎಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ಶಕ್ತಿ ಮೋಹನ್​ ಅವಸ್ಥಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries