ನವದೆಹಲಿ: ಕೇರಳದಲ್ಲಿ ಮಾಧ್ಯಮ ಸಂಸ್ಥೆಗಳ ವಿರುದ್ಧ ಪೋಲೀಸರ ಕ್ರಮದ ಬಗ್ಗೆ ಮಾಜಿ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಜಾವಡೇಕರ್ ಮಾತನಾಡಿ, ರಾಜ್ಯದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದ್ದು, ಎಡಪಕ್ಷ ಸರ್ಕಾರದ ತಪ್ಪುಗಳನ್ನು ಬಯಲಿಗೆಳೆಯುವ ಮಾಧ್ಯಮಗಳನ್ನು ಬೆದರಿಸುವ ಪ್ರಯತ್ನ ಮಾಡುತ್ತಿವೆ ಎಂದು ಟೀಕಿಸಿರುವರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಇದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆಯುತ್ತಿರುವುದು ದಬ್ಬಾಳಿಕೆಯಾಗಿದ್ದು, ಭ್ರಷ್ಟಾಚಾರದ ಕಥೆಗಳನ್ನು ಬಹಿರಂಗಪಡಿಸುವ ಮಾಧ್ಯಮ ಕಾರ್ಯಕರ್ತರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಕೆಲವು ಟೆಲಿವಿಷನ್ ಚಾನೆಲ್‍ಗಳು ಮತ್ತು ಮಾಧ್ಯಮ ಕಾರ್ಯಕರ್ತರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಯೂಟ್ಯೂಬ್ ಚಾನೆಲ್ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಮಾಧ್ಯಮ ಕಾರ್ಯಕರ್ತರ ಮನೆ ಮತ್ತು ಕಚೇರಿಗಳ ಮೇಲೆ ಪೋಲೀಸರು ದಾಳಿ ನಡೆಸಿರುವುದು ಪಿಣರಾಯಿ ಸರ್ಕಾರದ ಮಾಧ್ಯಮ ಬೇಟೆಗೆ ಇತ್ತೀಚಿನ ಉದಾಹರಣೆಯಾಗಿದೆ. ಇಂತಹ ದಬ್ಬಾಳಿಕೆಗಳನ್ನು ನಾಚಿಕೆಯಿಲ್ಲದೆ ಮುಂದುವರಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಬಿಬಿಸಿ ಸಾಕ್ಷ್ಯಚಿತ್ರ ನಿμÉೀಧದ ವಿರುದ್ಧ ಹಾಗೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದಣಿವರಿಯಿಲ್ಲದೆ ಮಾತನಾಡುತ್ತಿದ್ದಾರೆ. ರಾಜೀವ್ ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ದ್ವಂದ್ವ ನೀತಿ ಮತ್ತು ಬಹಿμÁ್ಕರದ ರಾಜಕಾರಣ ಮಾಡುವ ಸರಕಾರವಿದ್ದರೆ, ಕೇರಳದ ಮಾಕ್ರ್ಸ್‍ವಾದಿ ಸರ್ಕಾರ ಅಂತಹ ಸರಕಾರವನ್ನು ಪ್ರತಿನಿಧಿಸುತ್ತಿದೆ ಎಂದಿರುವರು.





