ಕೋಲ್ಕತ್ತ: 'ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ 'ಇಂಡಿಯಾ' ಸದಸ್ಯರ ನಿಯೋಗವು ಕೇವಲ ತೋರಿಕೆಗಾಗಿ ಭೇಟಿ ನೀಡಿದೆ' ಎಂದು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವ ಅನುರಾಗ್ ಠಾಕೂರ್ ವ್ಯಂಗ್ಯವಾಡಿದ್ದಾರೆ.
0
samarasasudhi
ಜುಲೈ 30, 2023
ಕೋಲ್ಕತ್ತ: 'ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ 'ಇಂಡಿಯಾ' ಸದಸ್ಯರ ನಿಯೋಗವು ಕೇವಲ ತೋರಿಕೆಗಾಗಿ ಭೇಟಿ ನೀಡಿದೆ' ಎಂದು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವ ಅನುರಾಗ್ ಠಾಕೂರ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಇಲ್ಲಿ ಮಾತನಾಡಿದ ಅವರು, 'ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಮಣಿಪುರ ಹೊತ್ತಿ ಉರಿದಿದೆ.
'ಕಣಿವೆ ರಾಜ್ಯಕ್ಕೆ ತೆರಳಿರುವ ನಿಯೋಗದ ಸದಸ್ಯರು ಮರಳಿ ಬಂದಾಗಲೂ ಸುಗಮವಾಗಿ ಸಂಸತ್‌ನ ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ' ಎಂದು ಆಪಾದಿಸಿದರು.
'ನೀವು ಮಣಿಪುರಕ್ಕೆ ಭೇಟಿ ನೀಡಿದರೆ ಸಾಲದು. ಪಶ್ಚಿಮ ಬಂಗಾಳದಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ರಾಜಸ್ಥಾನದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿಗೂ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಇದೇ ನಿಯೋಗವನ್ನು ಕರೆದೊಯ್ಯಬೇಕಿದೆ. ಬಳಿಕ ಎರಡೂ ರಾಜ್ಯಗಳಲ್ಲಿನ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಲಿ' ಎಂದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ನಾಗರಿಕರ ಹತ್ಯೆಗಳ ಮೂಲಕ ಅಧಿಕಾರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಇದನ್ನು ವಿರೋಧಿಸುವ ತಾಕತ್ತು ಕಾಂಗ್ರೆಸ್‌ಗೆ ಇದೆಯೇ ಎಂದು ಪ್ರಶ್ನಿಸಿದರು.