ನವದೆಹಲಿ: ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಮಿತ್ರ ಪಕ್ಷಗಳು ಒಂದೆಡೆ ಸೇರುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
0
samarasasudhi
ಜುಲೈ 18, 2023
ನವದೆಹಲಿ: ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಮಿತ್ರ ಪಕ್ಷಗಳು ಒಂದೆಡೆ ಸೇರುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಭೆ ಆರಂಭಕ್ಕೆ ಕೆಲವೇ ಹೊತ್ತಿನ ಮೊದಲು ಟ್ವೀಟ್ ಮಾಡಿರುವ ಮೋದಿ, ರಾಷ್ಟ್ರೀಯ ಪ್ರಗತಿ ಹಾಗೂ ಪ್ರಾದೇಶಿಕ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎನ್‌ಡಿಎ ಎದುರು ನೋಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.
'ಭಾರತದಾದ್ಯಂತ ಇರುವ ನಮ್ಮ ಎನ್‌ಡಿಎ ಮಿತ್ರಪಕ್ಷಗಳು ದೆಹಲಿಯಲ್ಲಿ ಸಭೆ ಸೇರಲಿರುವುದು ಅತ್ಯಂತ ಸಂತಸದ ಸಂಗತಿ. ನಮ್ಮ ಪರೀಕ್ಷಿತ ಪರಿಣಾಮಕಾರಿ ಮೈತ್ರಿಯು ಮತ್ತಷ್ಟು ರಾಷ್ಟ್ರೀಯ ಪ್ರಗತಿ ಹಾಗೂ ಪ್ರಾದೇಶಿಕ ನಿರೀಕ್ಷೆಗಳ ಸಾಕಾರಗೊಳಿಸುವುದನ್ನು ಎದುರು ನೋಡುತ್ತಿದೆ' ಎಂದು ಹೇಳಿದ್ದಾರೆ.