HEALTH TIPS

ಮಧ್ಯಪ್ರದೇಶ: ಶಿಕ್ಷಕಿಯಿಂದ ಥಳಿತಕ್ಕೊಳಗಾದ ಬಾಲಕ ಸಾವು

                ಗ್ವಾಲಿಯರ್‌ : (PTI): ಮಧ್ಯಪ್ರದೇಶದ ಗ್ವಾಲಿಯರ್‌ನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಿಂದ ಥಳಿ‌ತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 12 ವರ್ಷದ ಬಾಲಕ ಭಾನುವಾರ ಮೃತ‍ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

             8ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲ‌ಕ ಜುಲೈ 12ರಂದು ಹೋಮ್‌ವರ್ಕ್‌ ಮಾಡದೇ ಇದ್ದಿದ್ದರಿಂದ ಶಿಕ್ಷಕಿ ಬಾಲಕನಿಗೆ ಥಳಿಸುವುದರ ಜೊತೆಗೆ ಇತರ ಶಿಕ್ಷೆಯನ್ನು ನೀಡಿದ್ದರು.

                 ಈ ಘಟನೆ ಬಳಿಕ ಬಾಲಕ ಅಸ್ವಸ್ಥ‌ನಾಗಿದ್ದ ಎಂದು ಪೋಷಕರು ಆರೋಪಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಮೀನ ತಿಳಿಸಿದ್ದಾರೆ.

                 ಬಾಲಕನ ಶವ ಪರೀಕ್ಷೆ ನಡೆಸಲಾಗುತ್ತಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                 'ಅಸ್ವಸ್ಥನಾದ ಮಗನಿಗೆ ಸರ್ಕಾರಿ ಆಸ್ಪತ್ರೆ ಬದಲಾಗಿ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸುವಂತೆ ಶಿಕ್ಷಕಿ ನಮ್ಮ ಮೇಲೆ ಒತ್ತಡ ಹೇರಿದ್ದರು. ಈ ಮೊದಲು ಕೂಡ ಶಿಕ್ಷಕಿ ಇದೇ ರೀತಿ ಮಗನಿಗೆ ಥಳಿಸಿದ್ದರು. ಆಗ ಶಾಲಾ ಆಡಳಿತ ಮಂಡಳಿ ಈ ರೀತಿ ಮುಂದೆ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದರು' ಎಂದು ಬಾಲಕನ ತಂದೆ ಕೋಕ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries