HEALTH TIPS

ಬಾಲ್ಯದಲ್ಲೇ ಖುಷಿಗಾಗಿ ಓದಿದ ಮಕ್ಕಳ ಹದಿಹರೆಯ ಸುಂದರ!; ಸಾವಿರಾರು ಮಕ್ಕಳನ್ನು ಒಳಗೊಂಡ ಅಧ್ಯಯನದಲ್ಲಿ ಬಹಿರಂಗ

               ಲಂಡನ್: ನಿಮ್ಮ ಮಕ್ಕಳು ಒಳ್ಳೆಯವರಾಬೇಕೇ? ಹಾಗಿದ್ದರೆ ಅವರಿಗೆ ಚಿಕ್ಕಂದಿನಲ್ಲೇ ಓದಿನ ರುಚಿ ಹತ್ತಿಸಿ. ಅರ್ಥಾತ್, ಮಕ್ಕಳು ಬಾಲ್ಯದಲ್ಲೇ ಓದುವ ಖುಷಿ ಅನುಭವಿಸುವಂತೆ ಮಾಡಿ..

                      ಹೀಗೆ ಮಾಡಿದರೆ ಅವರ ಹದಿಹರೆಯದಲ್ಲಿ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

              ಬಾಲ್ಯದಲ್ಲಿ ಓದಿನಲ್ಲಿ ಸಂತೋಷವನ್ನು ಕಾಣುವ ಮಕ್ಕಳು ಅರ್ಥಾತ್ ಖುಷಿಗಾಗಿ ಓದುವ ಮಕ್ಕಳು ಹದಿಹರೆಯದಲ್ಲಿ ಉತ್ತಮ ಮಾನಸಿಕ ಆರೋಗ್ಯ ಹೊಂದಿರುತ್ತಾರೆ ಎಂಬುದನ್ನು 'ಸೈಕಲಾಜಿಕಲ್ ಮೆಡಿಸಿನ್' ಎಂಬ ಜರ್ನಲ್​ನಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

                ಇದಕ್ಕಾಗಿ ಹತ್ತು ಸಾವಿರಕ್ಕೂ ಅಧಿಕ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಆ ಪ್ರಕಾರ ಬಾಲ್ಯದ ಓದು ಹದಿಹರೆಯದಲ್ಲಿನ ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂಬುದು ತಿಳಿದುಬಂದಿದೆ. ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಾದ 10,243 ಮಕ್ಕಳು ವಾರಕ್ಕೆ ಸುಮಾರು 12 ಗಂಟೆಗಳ ಕಾಲ ಓದಿನಲ್ಲಿ ತೊಡಗಿಕೊಂಡಿದ್ದು, ಅದು ಅವರ ಮೆದುಳಿನ ರಚನೆಯಲ್ಲಿ ಗಣನೀಯ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಅವರ ಹದಿಹರೆಯದಲ್ಲಿನ ಕಲಿಕೆ, ಸ್ಮರಣೆ, ಮಾತಿನ ಅಭಿವೃದ್ಧಿ, ಶೈಕ್ಷಣಿಕ ಸಾಧನೆ ಎಲ್ಲದರಲ್ಲೂ ಹೆಚ್ಚಿನ ಸುಧಾರಣೆ ಕಂಡುಬಂದಿದೆ.

                 ಮಕ್ಕಳು ಚಿಕ್ಕವಯಸ್ಸಿನಲ್ಲಿ ಖುಷಿಗಾಗಿ ಓದಿನಲ್ಲಿ ತೊಡಗಿಸಿಕೊಂಡಷ್ಟೂ ಮುಂದೆ ಅವರ ಸ್ಕ್ರೀನ್​ಟೈಮ್​ನಲ್ಲೂ ಗಣನೀಯ ಇಳಿಕೆ ಕಂಡುಬರುತ್ತದೆ. ಓದು ಬರೀ ಖುಷಿಯ ಸಂಗತಿಯಲ್ಲ, ಅದು ಯೋಚನೆ ಮತ್ತು ಸೃಜನಶೀಲತೆ, ಸಹಾನುಭೂತಿಯನ್ನು ಹೆಚ್ಚಿಸುವ ಜತೆಗೆ ಒತ್ತಡವನ್ನು ತಗ್ಗಿಸುತ್ತದೆ. ಬಾಲ್ಯದಲ್ಲೇ ಆರಂಭವಾಗುವ ಖುಷಿಗಾಗಿ ಓದುವ ಅಭ್ಯಾಸ ಮಕ್ಕಳ ಮೆದುಳು-ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕೇಂಬ್ರಿಡ್ಜ್​ ಯುನಿವರ್ಸಿಟಿ ಸೈಕಿಯಾಟ್ರಿ ವಿಭಾಗದ ಪ್ರೊ. ಬರ್ಬರಾ ಸಹಕಿಯಾನ್ ಹೇಳಿದ್ದಾರೆ.

                   ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಓದುವ ಸಂತೋಷವನ್ನು ಜಾಗೃತಗೊಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುವಂತೆ ನಾವು ಪೋಷಕರನ್ನು ಪ್ರೋತ್ಸಾಹಿಸುತ್ತೇವೆ. ಸರಿಯಾಗಿ ಓದಿದರೆ ಅದು ಅವರಿಗೆ ಸಂತೋಷ ಮತ್ತು ಆನಂದವನ್ನು ನೀಡುವುದಲ್ಲದೆ ಅವರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲೀನ ಓದುವ ಅಭ್ಯಾಸವನ್ನು ಪ್ರೋತ್ಸಾಹಿಸುತ್ತದೆ, ಇದು ವಯಸ್ಕ ಜೀವನದಲ್ಲಿ ಪ್ರಯೋಜನಕಾರಿ ಎಂದು ಶಾಂಘೈ ಫುಡನ್ ಯುನಿವರ್ಸಿಟಿ ಪ್ರೊ.ಜಿಯಾನ್​ಫೆಂಗ್ ಫೆಂಗ್ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries