ನವದೆಹಲಿ: ವಂಚನೆ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಕೆಳಹಂತದ ಕೋರ್ಟ್‌ಗಳು ಆರೋಪಿಗಳಿಗೆ, ವಂಚಿಸಿರುವ ಹಣವನ್ನೇ ಠೇವಣಿ ಇಡುವಂತೆ ತಿಳಿಸುತ್ತಿರುವುದು 'ಆತಂಕಕಾರಿ ಪ್ರವೃತ್ತಿ' ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
0
samarasasudhi
ಜುಲೈ 05, 2023
ನವದೆಹಲಿ: ವಂಚನೆ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಕೆಳಹಂತದ ಕೋರ್ಟ್‌ಗಳು ಆರೋಪಿಗಳಿಗೆ, ವಂಚಿಸಿರುವ ಹಣವನ್ನೇ ಠೇವಣಿ ಇಡುವಂತೆ ತಿಳಿಸುತ್ತಿರುವುದು 'ಆತಂಕಕಾರಿ ಪ್ರವೃತ್ತಿ' ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠವು, 'ಜಾಮೀನು ಪಡೆಯಲು ಹಣ ಠೇವಣಿ ಇಡುವಂತೆ ಷರತ್ತು ವಿಧಿಸುವುದು, ಹಣ ಠೇವಣಿ ಇಟ್ಟು ಜಾಮೀನು ಪಡೆಯಬಹುದು ಎಂಬ ನಂಬಿಕೆ ಗಟ್ಟಿಯಾಗಿಸುತ್ತಿದೆ.
ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 438ರ ಅನುಸಾರ ಜಾಮೀನು ಕೋರಿ ಸಲ್ಲಿಸಿದ್ದ ಮನವಿ ಪುರಸ್ಕರಿಸುವಾಗ ನಿಯಮಗಳನ್ನು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ, ಜಾಮೀನು ನೀಡಲು ಷರತ್ತು ವಿಧಿಸುವುದಕ್ಕೆ ಸಹಮತವಿಲ್ಲ ಎಂದು ಹೇಳಿದೆ.
ಸಿಆರ್‌ಪಿಸಿಯ ಸೆಕ್ಷನ್ 438ರ ಉಪ ಕಾಲಂ (2), ಹೈಕೋರ್ಟ್ ಮತ್ತು ಸೆಷನ್ಸ್ ಕೋರ್ಟ್‌ಗಳಿಗೆ ಮಾತ್ರವೇ ಹೀಗೆ ದಂಡ ವಿಧಿಸಲು ಅಧಿಕಾರ ನೀಡಲಿದೆ ಎಂದೂ ಪೀಠ ಅಭಿಪ್ರಾಯಪಟ್ಟಿತು.
ಜಾಮೀನು ಪಡೆಯಲು ₹ 2 ಲಕ್ಷ ಠೇವಣಿ ಇಡಬೇಕು ಎಂದು ಷರತ್ತು ವಿಧಿಸಿದ್ದ ಪ್ರಕರಣದಲ್ಲಿ ಅರ್ಜಿದಾರ ರಮೇಶ್ ಕುಮಾರ್ ಅವರ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದೂ ಪೀಠವು ದೆಹಲಿ ಹೈಕೋರ್ಟ್‌ಗೆ ವರ್ಗಾಹಿಸಿತು.