HEALTH TIPS

ಕನ್ನಡ ಮಕ್ಕಳ ಗೋಳಿನ ಕಥೆಗೆ ಕಳೆಯಿತೊಂದು ತಿಂಗಳು... ಇನ್ನೂ ಬಗೆಹರಿಯದ ಸಮಸ್ಯೆ: ಮಕ್ಕಳ ಭಾವನೆಗೆ ಸ್ಪಂದಿಸದ ಕೇರಳ ಸರ್ಕಾರ: ಮುಖ್ಯ ಶಿಕ್ಷಕರಿಗೆ ವರ್ಗಾವಣೆಯ ಶಿಕ್ಷೆ

              ಮುಳ್ಳೇರಿಯ: ಜಿಲ್ಲೆಯ ಅಡೂರಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ವಿದ್ಯಾರ್ಥಿಗಳ ಹಾಗೂ ಪೋಷಕರ ಹೋರಾಟಕ್ಕೆ ತಿಂಗಳು ಒಂದು ಕಳೆದಿದೆ. ಕಳೆದ ಜೂ.3ರಂದು ಅಡೂರು ಶಾಲೆಯ ಕನ್ನಡ ಮಕ್ಕಳಿಗೆ ಸಮಾಜ ವಿಜ್ಞಾನ ಕಲಿಸಲು ಮಲಯಾಳಿ ಭಾಷೆಯ ಶಿಕ್ಷಕಿಯನ್ನು ಕೇರಳ ಸರ್ಕಾರ ನೇಮಿಸಿದಾಗ ಕನ್ನಡಿಗ ವಿದ್ಯಾರ್ಥಿಗಳು ಅವರ ಪಾಠದ ಶೈಲಿಯ ಬಗ್ಗೆ ಆತಂಕ ಪಡಿಸಿ ಪ್ರತಿಭಟನೆಗೆ ಇಳಿದಿದ್ದರು. ಜೂ.3ರ ಪ್ರತಿಭಟನೆಯಿಂದಾಗಿ ನೇಮಕವಾಗದೆ ತೆರಳಿದ್ದ ಶಿಕ್ಷಕಿಯು ಆದೂರು ಪೋಲೀಸರನ್ನು ಕರೆತಂದು ನೇಮಕಗೊಳ್ಳಲು ಪ್ರಯತ್ನಿಸಿದ್ದರು. ಆದರೆ ಮುಖ್ಯ ಶಿಕ್ಷಕರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ನೇಮಕಾತಿ ಸಾಧ್ಯವಾಗಿರಲಿಲ್ಲ. ಅನಂತರ ಜಿಲ್ಲಾಧಿಕಾರಿ ಸಹಿತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಿಕ್ಷಕಿಯ ನೇಮಕಾತಿಯಿಂದಾಗುವ ಸಮಸ್ಯೆಗಳ ಬಗ್ಗೆ ಕನ್ನಡ ಪೋಷಕರು ಮನವರಿಕೆ ಮಾಡಿದ್ದರು. ಆದರೆ ಜೂ.16ರಂದು ಏಕಾಏಕಿಯಾಗಿ ಶಾಲೆಗೆ ಆಗಮಿಸಿ ನೇಮಕಾತಿ ಪಡೆದು ತರಗತಿಗೆ ಮಲಯಾಳಿ ಭಾμÉಯ ಶಿಕ್ಷಕಿಯು ತೆರಳಿದಾಗಲೇ ಕನ್ನಡ ಮಕ್ಕಳ ಹಾಗೂ ಪೋಷಕರ ಅಸಮಾಧಾನ ಕಟ್ಟೆಯೊಡೆದಿತ್ತು. ಬಳಿಕ ಕನ್ನಡದ ಮಕ್ಕಳು ಮಲಯಾಳಿ ಶಿಕ್ಷಕಿಯ ಪಾಠ ಅರ್ಥವಾಗುತ್ತಿಲ್ಲ ಎಂದು ನಿರಂತರವಾಗಿ ತರಗತಿ ಬಹಿಷ್ಕರಿಸುತ್ತಿದ್ದಾರೆ. ಆದರೂ ಕೂಡಾ ಕೇರಳ ಸರ್ಕಾರ ಮಕ್ಕಳ ಹಿತರಕ್ಷಣೆಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ. ಈ ಮಕ್ಕಳಿಗೆ ಕಳೆದ ಒಂದು ತಿಂಗಳಿನಿಂದ ಸಮಾಜ ವಿಜ್ಞಾನ ತರಗತಿಗಳು ನಡೆಯುತ್ತಿಲ್ಲ. ಮಲಯಾಳಿ ಶಿಕ್ಷಕಿಯ ಪಾಠ ಕೇಳಲು ಮಕ್ಕಳು ಸಿದ್ಧರಾಗುತ್ತಿಲ್ಲ. ಮಕ್ಕಳಿಗೆ ಮಾತೃಭಾಷೆ ಶಿಕ್ಷಣವನ್ನು ನೀಡುವ ಜವಾಬ್ದಾರಿಯಿರುವ ಕೇರಳ ಸರ್ಕಾರದ ಈಗಿನ ನಿಲುವಿನ ಬಗ್ಗೆ ಸಾರ್ವತ್ರಿಕವಾಗಿ ಅಸಮಾಧಾನ ಕೇಳಿ ಬಂದಿದೆ. 

            ಮಕ್ಕಳಿಂದ ತರಗತಿ ಬಹಿμÁ್ಕರ : ಕಳೆದ ಸುಮಾರು 15 ದಿನಗಳಿಂದ ಮಲಯಾಳಿ ಶಿಕ್ಷಕಿಯು ಕನ್ನಡ ತರಗತಿಗೆ ಪಾಠಕ್ಕೆ ಬಂದಾಗ ಸುಮಾರು 200 ಮಂದಿ ಕನ್ನಡದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಹೊರ ನಡೆಯುತ್ತಾರೆ. ’ಮಲಯಾಳಿ ಶಿಕ್ಷಕಿಯ ಪಾಠ ಬೇಡವೇ ಬೇಡ. ನಮಗೆ ಕನ್ನಡ ಶಿಕ್ಷಕರನ್ನು ನೀಡಿ’ ಎಂಬ ಮಕ್ಕಳ ಆರ್ತನಾದಕ್ಕೆ ಕೇರಳ ಸರ್ಕಾರ ಇನ್ನೂ ಸ್ಪಂದಿಸಿಲ್ಲ. ಈಗಾಗಲೇ ಈ ವರ್ಷದ ಶೈಕ್ಷಣಿಕ ಅವಧಿಯ ಒಂದು ತಿಂಗಳು ಮುಗಿದಿರುವುದರಿಂದ ಕನ್ನಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೇರಳ ಸರ್ಕಾರ ಚೆಲ್ಲಾಟವಾಡಬಾರದು ಎಂದು ಪೋಷಕರು ಮನವಿ ಮಾಡಿದ್ದಾರೆ. 

          ಮುಖ್ಯ ಶಿಕ್ಷಕರ ವರ್ಗ : ಮಲಯಾಳ ಭಾμÉಯ ಶಿಕ್ಷಕಿಯ ನೇಮಕಾತಿಯ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸಿದ ಹಾಗೂ ಕನ್ನಡ ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರತಿಭಟನೆಯ ಸಂದರ್ಭದಲ್ಲಿ ಮಲಯಾಳ ಶಿಕ್ಷಕಿಗೆ ಪೋಲೀಸ್ ಭದ್ರತೆ ನೀಡದ ಕಾರಣದಿಂದ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರನ್ನು ವಯನಾಡಿನ ಸರ್ಕಾರಿ ಹೈಸ್ಕೂಲಿಗೆ ವರ್ಗಾವಣೆ ಮಾಡಲಾಗಿದೆ. ಜೂ. 30ರಂದು ಅವರು ವಯನಾಡ್ ಸರ್ಕಾರಿ ಶಾಲೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಲಯಾಳಿ ಶಿಕ್ಷಕಿಯನ್ನು ವರ್ಗಾವಣೆ ಮಾಡದೆ, ಮುಖ್ಯ ಶಿಕ್ಷಕರನ್ನೇ ವರ್ಗಾವಣೆ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. 

             ಹೈಕೋರ್ಟ್ ಮೆಟ್ಟಿಲೇರಿದ ವಿವಾದ : ಇದೀಗ ಮಲಯಾಳಿ ಶಿಕ್ಷಕಿಯ ನೇಮಕಾತಿಯಿಂದಾಗಿ ಕನ್ನಡಿಗ ಮಕ್ಕಳು ಮಾತೃಭಾಷಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿ ಅಡೂರಿನ ಕನ್ನಡಿಗ ಪೋಷಕರು ಕನ್ನಡ ಹೋರಾಟ ಕ್ರಿಯಾ ಸಮಿತಿಯನ್ನು ರಚಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಾಸರಗೋಡಿನ ಕನ್ನಡ ಪರ ಸಂಘಟನೆಗಳು, ಕರ್ನಾಟಕ ಸರ್ಕಾರ ಹಾಗೂ ಸಾರ್ವತ್ರಿಕವಾಗಿ ಕನ್ನಡ ಭಾಷಾಭಿಮಾನಿಗಳು ಅಡೂರಿನ ಕನ್ನಡಿಗ ಮಕ್ಕಳಿಗೆ ಶಕ್ತಿಯಾಗಬೇಕಾಗಿದೆ. ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳಿ ಶಿಕ್ಷಕಿ ಪಾಠ ಮಾಡುವ ಕಾನೂನುಗಳಿಗೆ ತಿದ್ದುಪಡಿ ಮಾಡಬೇಕಾಗಿದೆ. ವಿವಾದ ಬಗೆಹರಿಯದಲ್ಲಿ ನೇಮಕವಾದ ಮಲಯಾಳಿ ಶಿಕ್ಷಕಿಗಾಗಲೀ, ಕೇರಳ ಸರ್ಕಾರಕ್ಕಾಗಲೀ ಯಾವುದೇ ನಷ್ಟವಿಲ್ಲ. ಸರ್ಕಾರಿ ಶಾಲೆಯಲ್ಲಿ ಕಲಿಯಲೆಂದು ಬಂದ ಕನ್ನಡದ ಮಕ್ಕಳ ಭವಿಷ್ಯ ಮಾತ್ರ ಭಾರೀ ಅಪಾಯಕ್ಕೆ ಸಿಲುಕಬಹುದು ಎಂದು ಪೋಷಕರು ಹೇಳುತ್ತಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries