ಕಾಸರಗೋಡು: ಹರಿದಾಸ,ಭಜನಾ ಸಂಕೀರ್ತನಾಕಾರ ಜಯಾನಂದ ಕುಮಾರ್ ಹೊಸದುರ್ಗಾ ನೇತೃತ್ವದಲ್ಲಿ ವಷರ್ಂಪ್ರತಿ ಕರ್ಕಟಕ ಮಾಸದಲ್ಲಿ ನಡೆಯುವ ಮನೆ ಮನೆ ಭಜನಾ ಅಭಿಯಾನಕ್ಕೆ ಮಧೂರಿನಲ್ಲಿ ಚಾಲನೆ ನೀಡಲಾಯಿತು.
ಮಧೂರಿನ ಪ್ರಣವ ಮಹಿಳಾ ಭಕ್ತವೃಂದದ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಕರ್ಕಾಟಕ ಮಾಸವನ್ನು ರಾಮಾಯಣ ಮಾಸಾಚಾರಣೆಯ ಮನೆ ಮನೆ ಭಜನಾ ಅಭಿಯಾನ ನಡೆಸಲಾಗುತ್ತಿದ್ದು ಹರಿದಾಸ ಜಯಾನಂದ ಕುಮಾರ್ ಅವರ ಬಳಿ ತರಬೇತಿ ಪಡೆಯುತ್ತಿರುವ ಭಜನಾ ಸಂಘಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ಅಭಿಯಾನ ನಡೆಸಲಾಗುತ್ತಿದೆ. ಕರ್ಕಟಕದ ದುರಿತಗಳನ್ನು ದೂರೀಕರಿಸಿ ಪ್ರತಿಯೊಬ್ಬರಲ್ಲೂ ದೈವಿಕ ಚೈತನ್ಯ ಮೂಡಬೇಕೆಂಬ ಉದ್ದೇಶದಿಂದ ಮನೆ ಮನೆ ಭಜನಾ ಅಭಿಯಾನ ನಡೆಸಲಾಗುತ್ತಿದೆ. ಮಧೂರಿನ ಪ್ರಣವ ಮಹಿಳಾ ವೃಂದದ ಸಹಕಾರದಿಂದ ನಡೆದ ಕಾರ್ಯಕ್ರಮವನ್ನು ಹರಿದಾಸ ಜಯಾನಂದ ಕುಮಾರ್ ಉದ್ಘಾಟಿಸಿದರು.


