HEALTH TIPS

ಯುಸಿಸಿ: ಕಾನೂನು ಆಯೋಗದಿಂದ ಅಭಿಪ್ರಾಯ ಸಂಗ್ರಹ

             ವದೆಹಲಿ: ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಪ್ರಸ್ತುತತೆ ಮತ್ತು ಪ್ರಾಮುಖ್ಯತೆ, ವಿಷಯ ಕುರಿತು ವಿವಿಧ ಕೋರ್ಟ್‌ಗಳ ಆದೇಶಗಳ ಹಿನ್ನೆಲೆಯಲ್ಲಿ ಭಾರತೀಯ ಕಾನೂನು ಆಯೋಗವು ಭಾಗಿದಾರರ ಅಭಿಪ್ರಾಯಗಳನ್ನು ಆಹ್ವಾನಿಸಲು ನಿರ್ಧರಿಸಿದೆ ಎಂದು ಕೇಂದ್ರ ತಿಳಿಸಿದೆ.

               ಕೇಂದ್ರದ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಅವರು ಈ ಸಂಬಂಧ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

           'ಯುಸಿಸಿ ಅಗತ್ಯ ಅಲ್ಲ, ಅಪೇಕ್ಷಣೀಯವು ಅಲ್ಲ' ಎಂದು ಆಯೋಗದ ಸಮಿತಿಯು ವರದಿ ನೀಡಿದ 4 ವರ್ಷದ ನಂತರ, ಈಗ 22ನೇ ಕಾನೂನು ಆಯೋಗವು ಸಾರ್ವಜನಿಕರು, ಭಾಗಿದಾರರ ಅಭಿಪ್ರಾಯ ಆಹ್ವಾನಿಸಲು ಕಾರಣವೇನು ಎಂಬ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.

                ಯುಸಿಸಿ ಕುರಿತು ಭಾಗಿದಾರರ ಕಾನೂನು ಆಯೋಗವು ಕಳೆದ ಜೂನ್‌ ತಿಂಗಳಲ್ಲಿ ಅಭಿಪ್ರಾಯವನ್ನು ಆಹ್ವಾನಿಸಿತ್ತು. ಆಯೋಗವು ಇದುವರೆಗೂ 50 ಲಕ್ಷಕ್ಕೂ ಹೆಚ್ಚು ಜನರಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries