HEALTH TIPS

ತರಕಾರಿ ಅಂಗಡಿಗಳಲ್ಲಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು-ದರದಲ್ಲಿ ಭಾರೀ ವ್ಯತ್ಯಾಸ: ದರಪಟ್ಟಿ ಪ್ರದರ್ಶಿಸದ ಅಂಗಡಿಗಳಿಗೆ ತಾಕೀತು

 


 

                     ಕಾಸರಗೋಡು: ನೀಲೇಶ್ವರ ಮತ್ತು ಚೆರುವತ್ತೂರಿನಲ್ಲಿ ತರಕಾರಿ ಬೆಲೆ ಗಣನೀಯವಾಗಿ ಏರಿಕೆಯಾಗಿರುವ  ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳು ಅಂಗಡಿಗಳಲ್ಲಿ ತಪಾಸಣೆ ನಡೆಸಿದರು

                      ಚೆರುವತ್ತೂರಿನ ಕೆಲವು ಅಂಗಡಿಗಳಲ್ಲಿ ಕ್ಯಾರೆಟ್, ಟೊಮ್ಯಾಟೊ, ಈರುಳ್ಳಿ ಮತ್ತು ಬೀನ್ಸ್‍ಗೆ ವ್ಯತ್ಯಸ್ತ ದರ ವಿಧಿಸುತ್ತಿರುವುದನ್ನು ಅಧಿಕಾರಿಗಲು ಪತ್ತೆಹಚ್ಚಿದ್ದಾರೆ.  ಚೆರುವತ್ತೂರಿನ ಅಂಗಡಿಯೊಂದರಲ್ಲಿ 70 ರಿಂದ 75 ರೂ.80 ರೂ. ಬೆಲೆಯಿರುವ ಪ್ರತಿ ಕೆ.ಜಿ ಕ್ಯಾರೆಟ್‍ಗೆ 104 ರೂ. ವಸೂಲಿಮಾಡುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಪ್ರತಿ ಕೊಲೋಗೆ 80ರೂ. ದರ ಇರುವ ಬೀನ್ಸ್ 88 ರೂ.ಗೆ ಮಾರಾಟವಾಗುತ್ತಿದೆ. ಟೊಮೆಟೊ 95 ರಿಂದ 100 ರೂ, 25ರಿಂದ 30 ರೂ. ಈರುಳ್ಳಿ ಬೆಲೆ ಇದೆ. ಕಿರಾಣಿ ಅಂಗಡಿಗಳು, ತರಕಾರಿ ವ್ಯಾಪಾರಿಗಳು, ಹೋಟೆಲ್‍ಗಳು ಮತ್ತು ಬೇಕರಿಗಳಲ್ಲೂ ತಪಾಸಣೆ ನಡೆಸಿದರು. ಹಲವೆಡೆ ವ್ಯಾಪಾರಿಗಳು ತಮಗೆ ತೋಚಿದ ರಈತಿಯಲ್ಲಿ ದರ ವಸೂಲಿ ನಡೆಸುತ್ತಿರುವುದಾಗಿ ತಾಲೂಕು ಆಹಾರ ಪೂರೈಕೆ ಅಧಿಕಾರಿ ಕೆ.ಎನ್.ಬಿಂದು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪರಿಶೀಲನೆ ನಡೆಸಲಾಗಿದೆ. ದರಪಟ್ಟಿ ಅಳವಡಿಸದ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಾಮಗ್ರಿಯ ದರ ಸ್ಪಷ್ಟವಾಗಿ ಪ್ರದರ್ಶಿಸಿ, ಸಕಾಲದಲ್ಲಿ ಬೆಲೆ ಮಾಹಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಲು ಕೇಳಲಾಗಿದೆ. ಅಧಿಕ ಬೆಲೆ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಸರಬರಾಜು ಅಧಿಕಾರಿ ತಿಳಿಸಿದರು. ಪಡಿತರ ನಿರೀಕ್ಷಕರಾದ ಸೈಫುದ್ದೀನ್, ಶಶಿಕುಮಾರ್, ಇಮ್ಯಾನುವೆಲ್, ಹರಿದಾಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries