ತಿರುವನಂತಪುರಂ: ಉಮ್ಮನ್ ಚಾಂಡಿ ಅವರ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆಯ ಅಂಗವಾಗಿ ನಿನ್ನೆ ಸಾರ್ವಜನಿಕ ರಜೆ ಘೋಷಿಸಿದ್ದರೂ ರಾಜ್ಯದಲ್ಲಿ ಮದ್ಯದಂಗಡಿಗಳು ತೆರೆದಿದ್ದವು.
ಕಾರಣ ಬಿವರೇಜ್ ಗಳಿಗೆ ಇಂತಹ ಸಂದರ್ಭಗಳು ಉತ್ತಮ ಫಸಲಿನ ಕಾಲ. ಬಿಜೆಪಿ ವಕ್ತಾರ ಸಂದೀಪ್ ವಾಚಸ್ಪತಿ ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಇದು ಇಂದು ಕಂಡ ಅತಿ ದೊಡ್ಡ ಅಶ್ಲೀಲತೆ ಎಂದು ಲೇವಡಿ ಮಾಡಿದ್ದಾರೆ.
ಸಾವು, ಹುಟ್ಟು, ಜನ್ಮದಿನ, ಗೆಲುವು, ಸೋಲು, ವಿವಾಹ, ಇದೆಲ್ಲದಕ್ಕೂ ಮದ್ಯದ ಅವಶ್ಯಕತೆ ಇದೆಯೇ? ಮದ್ಯ ವಿತರಿಸದಿದ್ದರೆ ತಿಂಗಳಾಂತ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡುವವರಾರು? ಎಂಬುದೂ ಹೌದಷ್ಟೆ ಎಂದು ವ್ಯಂಗ್ಯ ಭರಿತ ಚಿಂತನೀಯ ವಿಷಯವನ್ನು ಬರೆದುಕೊಂಡು ಗಮನ ಸೆಳೆದಿದ್ದಾರೆ.




.webp)
