ಕಾಸರಗೋಡು : ಮಾಜಿ ಮುಖ್ಯಮಂತ್ರಿ ಊಮನ್ ಚಾಂಡಿ ಅವರ ಅಗಲುವಿಕೆಯಿಂದ ರಾಜ್ಯ ರಾಜಕೀಯದ ಅಜಾಶತ್ರುವೊಬ್ಬರನ್ನು ಕಳೆದುಕೊಳ್ಳುವಂತಾಗಿದೆ ಎಂದು ಕಾಸರಗೋಡು ನಗರಸಭಾ ಅಧ್ಯಕ್ಷ, ವಕೀಲ ವಿ.ಎಂ ಮುನೀರ್ ತಿಳಿಸಿದ್ದರೆ.
ಅವರು ಕೇರಳ ಮುನ್ಸಿಪಲ್ ಮತ್ತು ಕಾಪೆರ್Çೀರೇಶನ್ ಕಂಡಿಜಂಟ್ ನೌಕರರ ಸಂಘಟನೆ ಗುರುವಾರ ಕಾಸರಗೋಡಿನಲ್ಲಿ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.
ಕೆಎಂಸಿಸಿಇಸಿ ಜಿಲ್ಲಾಧ್ಯಕ್ಷ ಅರ್ಜುನ್ ತಾಯಲಂಗಡಿ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅಬ್ಬಾಸ್ ಬೀಗಂ, ಐಎನ್‍ಟಿಯುಸಿ ಜಿಲ್ಲಾ ಕಾರ್ಯದರ್ಶಿ.
ಉಮೇಶ್ ಅಣಂಗೂರು, ರಾಜ್ಯ ಸಮಿತಿ ಕಾರ್ಯದರ್ಶಿ ಬಾಲಕೃಷ್ಣನ್ ಕೆ, ಪುರುಷು ಮುದಲಪ್ಪಾರ, ರವೀಂದ್ರನ್ ತೋರ್ಕುಳಂ, ಸತೀಶನ ಕೊಳತ್ತೂರು, ಶೋಭಾ ಟಿ, ಪೀತಾಂಬರನ್, ಅಬೂಬಕರ್, ಸಂತೋಷ್ ಪೂವಡ್ಕ, ಸುರೇಶ್ ಪಾಯಂ, ತುಳಸಿ ಮೊದಲದವರು ಉಪಸ್ಥಿತರಿದ್ದರು.





