ಮಲಪ್ಪುರಂ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಆಶೀರ್ವಾದದೊಂದಿಗೆ ದೇವಸ್ಥಾನದಲ್ಲಿ ಹಿಂದೂ ಜೋಡಿಯ ವಿವಾಹ ನಡೆದಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಕೇರಳದ ಜಾತ್ಯತೀತ ರುಜುವಾತುಗಳನ್ನು ಪುನರುಚ್ಚರಿಸುವ ಮತ್ತೊಂದು ಘಟನೆಯಾಗಿ ಹೊರಹೊಮ್ಮಿದೆ.
0
samarasasudhi
ಜುಲೈ 11, 2023
ಮಲಪ್ಪುರಂ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಆಶೀರ್ವಾದದೊಂದಿಗೆ ದೇವಸ್ಥಾನದಲ್ಲಿ ಹಿಂದೂ ಜೋಡಿಯ ವಿವಾಹ ನಡೆದಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಕೇರಳದ ಜಾತ್ಯತೀತ ರುಜುವಾತುಗಳನ್ನು ಪುನರುಚ್ಚರಿಸುವ ಮತ್ತೊಂದು ಘಟನೆಯಾಗಿ ಹೊರಹೊಮ್ಮಿದೆ.
ವಿಷ್ಣು ಮತ್ತು ಗೀತಾ ದಂಪತಿಯ ವಿವಾಹವು ವೆಂಗಾರ ಶ್ರೀ ಅಮ್ಮಂಚೇರಿ ಭಗವತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.
ಶ್ರೀ ಅಮ್ಮಂಚೇರಿ ಭಗವತಿ ದೇವಸ್ಥಾನದಲ್ಲಿ, ನವ ಜೋಡಿಗಳಾದ ಗೀತಾ-ವಿಷ್ಣು ವಿವಾಹಕ್ಕೆ ಸಕಲ ವ್ಯವಸ್ಥೆಗಳನ್ನು ಉತ್ತರ ಕೇರಳ ಜಿಲ್ಲೆಯ ವೆಂಗರಾ ಪಂಚಾಯತ್‌ನ 12 ನೇ ವಾರ್ಡ್‌ನ ಮುಸ್ಲಿಂ ಯೂತ್ ಲೀಗ್ ಸಮಿತಿಯು ಮಾಡಿತ್ತು.
ಪಾಲಕ್ಕಾಡ್ ಮೂಲದ ಗೀತಾ ವೆಂಗಾರದ ಮನಾಟ್ಟಿಪರಂಬುವಿನ ರೋಸ್ ಮ್ಯಾನರ್ ಶಾರ್ಟ್ ಸ್ಟೇ ಹೋಮ್‌ನಲ್ಲಿ ವಾಸಿಸುತ್ತಿದ್ದರು. ವೆಂಗಾರ ಮಣಟ್ಟಿಪರಂಬು ಮುಸ್ಲಿಂ ಲೀಗ್ ಕಾರ್ಯಕರ್ತರು ಗೀತಾ ಅವರ ವಿವಾಹವನ್ನು ಆಯೋಜಿಸಿದ್ದರು. ಸ್ಟೇ ಹೋಮ್‌ನ ಸೂಪರಿಂಟೆಂಡೆಂಟ್ ಮೈತ್ರಿಯನ್ನು ಏರ್ಪಡಿಸಿ ವಿಷ್ಣು ಜತೆ ಗೀತಾಳ ಮದುವೆಯನ್ನು ನಿಶ್ಚಯಿಸಿದರೆ, ಐಯುಎಂಎಲ್‌ನ ಯುವ ವಿಭಾಗವು ಆರ್ಥಿಕ ನೆರವು ನೀಡಿತು. ಅಮ್ಮಂಚೇರಿ ಭಗವತಿ ದೇವಸ್ಥಾನದ ಪ್ರಾಂಗಣದಲ್ಲಿ ಈ ವಿವಾಹ ನಡೆದಿದೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪಿಕೆ ಕುನ್ಹಾಲಿಕುಟ್ಟಿ, 'ಇಂದು, ದೇವಾಲಯದ ಪ್ರಾಂಗಣವು ನನ್ನ ನೆಲದ ಏಕತೆ ಮತ್ತು ಸ್ನೇಹವನ್ನು ಸಾರುವ ಸುಂದರವಾದ ಚಿತ್ರಗಳಿಗೆ ಸಾಕ್ಷಿಯಾಗಿದೆ. ಇದು ಅನುಕರಿಸಲು ಉತ್ತಮ ಸಂದೇಶವಾಗಿದೆ. ವಿಷ್ಣು ಮತ್ತು ಗೀತಾ ಅವರು ದಾಂಪತ್ಯಕ್ಕೆ ಮೊದಲ ಹೆಜ್ಜೆ ಇಡುತ್ತಿರುವುದಕ್ಕೆ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.