HEALTH TIPS

ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ನಿರ್ಬಂಧ!

              ನವದೆಹಲಿ: ದೇಶೀಯವಾಗಿ ಅಕ್ಕಿ ಪೂರೈಕೆಯನ್ನು ಉತ್ತೇಜಿಸಲು ಹಾಗೂ ಬೆಲೆಯನ್ನು ನಿಯಂತ್ರಿಸಲು ಸರ್ಕಾರ ಬಾಸ್ಮತಿಯೇತರ ಅಕ್ಕಿಯ ರಫ್ತನ್ನು ನಿರ್ಬಂಧಿಸಿದೆ.

            ಮುಂದೆ ಹಬ್ಬಗಳ ಸಾಲು ಇದ್ದು, ಈ ಅವಧಿಯಲ್ಲಿ ಅಕ್ಕಿ ಪೂರೈಕೆ ವ್ಯತ್ಯಯವಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

               ದೇಶದಿಂದ ರಫ್ತಾಗುವ ಒಟ್ಟು ಅಕ್ಕಿಯ ಶೇ.25 ರಷ್ಟು ಬಾಸ್ಮತಿಯೇತರ ಅಕ್ಕಿ ಇದೆ. 2022-23 ರಲ್ಲಿ ಭಾರತದಿಂದ ಒಟ್ಟು 4.2 ಮಿಲಿಯನ್ ಡಾಲರ್ ಮೌಲ್ಯದ ಬಾಸ್ಮತಿಯೇತರ ಬಿಳಿ ಅಕ್ಕಿಯನ್ನು ರಫ್ತು ಮಾಡಲಾಗಿತ್ತು. ಈ ವರ್ಷ 2.62 ಮಿಲಿಯನ್ ಡಾಲರ್ ಮೌಲ್ಯದ ಅಕ್ಕಿಯನ್ನು ರಫ್ತು ಮಾಡಲಾಗಿದೆ.

                   ಥಾಯ್ಲ್ಯಾಂಡ್, ಇಟಲಿ, ಸ್ಪೇನ್, ಶ್ರೀಲಂಕಾ, ಯುಎಸ್ಎ  ಭಾರತದ ಬಾಸ್ಮತಿಯೇತರ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಾಗಿವೆ. ಈ ವರೆಗೂ ಮುಕ್ತವಾಗಿದ್ದ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ರಫ್ತು ನೀತಿ (ಅರ್ಧ ಅಥವಾ ಸಂಪೂರ್ಣವಾಗಿ ಗಿರಣಿ ಮಾಡಿದ ಅಕ್ಕಿ, ಪಾಲಿಶ್ ಮಾಡಿರಲಿ ಅಥವಾ ಪಾಲಿಶ್ ಮಾಡಿರದ ಅಕ್ಕಿ)ಯನ್ನು ಈಗ ನಿರ್ಬಂಧಿಸಲಾಗಿದೆ ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries