ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ಸರ್ಕಾರಿ ನೌಕರರ ಭಾನುವಾರದ ರಜೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರದ್ದು ಮಾಡಿ, ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
0
samarasasudhi
ಜುಲೈ 09, 2023
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ಸರ್ಕಾರಿ ನೌಕರರ ಭಾನುವಾರದ ರಜೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರದ್ದು ಮಾಡಿ, ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
1982 ರ ನಂತರ ಇದೇ ಮೊದಲ ಬಾರಿಗೆ 24 ಗಂಟೆಗಳಲ್ಲಿ ದಾಖಲೆಯ 15.3 ಸೆಂ.ಮೀ ಮಳೆಯಾಗಿದೆ.
ಪಶ್ಚಿಮದಲ್ಲಿ ಆಗಿರುವ ಅಡಚಣೆ ಮತ್ತು ಮಾನ್ಸೂನ್ ಮಾರುತಗಳ ಪರಿಣಾಮ ದೆಹಲಿ ಸೇರಿದಂತೆ ವಾಯವ್ಯ ಭಾರತದಲ್ಲಿ ತೀವ್ರವಾದ ಮಳೆಗೆ ಕಾರಣವಾಗುತ್ತಿದೆ. ಇದು ಋತುವಿನಲ್ಲಿ ಭಾರೀ ಮಳೆಗೆ ಕಾರಣವಾಗಿದೆ. ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.