HEALTH TIPS

ಮಳೆಗಾಲದಲ್ಲಿ ಮಟ್ಟಾ ರೈಸ್‌ ಗಂಜಿ ತಿಂದ್ರೆ ಈ ಪ್ರಯೋಜನಗಳಿವೆ ಗೊತ್ತಾ?

 ಮಳೆಗಾಲದಲ್ಲಿ ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಬೇಕು, ಇಲ್ಲದಿದ್ದರೆ ಮಳೆಗಾಲ ಕಳೆಯುವಷ್ಟರಲ್ಲಿ ನಮ್ಮ ಮೈ ತೂಕ ಹೆಚ್ಚಾಗಿರುತ್ತದೆ, ಕಾರಣ ಈ ಸಮಯದಲ್ಲಿ ಹೆಚ್ಚು ಹೊರಗಡೆ ಓಡಾಡುವುದಿಲ್ಲ, ಮಳೆ ಸುರಿಯುತ್ತಿರುವಾಗ ಬಜ್ಜಿ, ಬೋಂಡಾ ಅಂತ ಬಾಯಿ ಚಪಲ ಕೂಡ ಅಧಿಕವಾಗುವುದರಿಂದ ನಮ್ಮ ಮೈ ತೂಕ ಹೆಚ್ಚಾಗುವುದು.

ಇನ್ನು ಮಧುಮೇಹಿಗಳು, ಕೊಲೆಸ್ಟ್ರಾಲ್‌ ಇರುವವರು ಮಳೆಗಾಲದಲ್ಲಿ ಆಹಾರಕ್ರಮದ ಕಡೆಗೆ ಹೆಚ್ಚಿನ ಗಮನಹರಿಸದಿದ್ದರೆ ಆರೋಗ್ಯ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.

ಮಳೆಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಲು ಮಟ್ಟಾ ರೈಸ್ ಅಥವಾ ಕೆಂಪಕ್ಕಿ ಅನ್ನ ತುಂಬಾನೇ ಸಹಕಾರಿಯಾಗಿದೆ ನೋಡಿ. ಮಧುಮೇಹ ನಿಯಂತ್ರಣದಲ್ಲಿಡಬೇಕು, ಫಿಟ್ನೆಸ್‌ ಕಾಪಾಡಬೇಕೆಂದು ಬಯಸುವವರಿಗೆ ಈ ಮಟ್ಟಾ ರೈಸ್‌ ತುಂಬಾನೇ ಪ್ರಯೋಜನಕಾರಿ. ಆಯುರ್ವೇದದಲ್ಲಿ ಕೂಡ ಈ ಅಕ್ಕಿಯನ್ನು ಬಳಸಲಾಗುವುದು. ಆಯುರ್ವೇದಕ್ಕೆ ಹೆಸರುವಾಸಿಯಾಗಿರುವ ಕೇರಳದಲ್ಲಿ ಮಳೆಗಾಲದಲ್ಲಿ ಕರ್ಕಡ ಗಂಜಿ ಮಾಡಿ ಸವಿಯಲಾಗುವುದು.

ಇದರ ಗಂಜಿ ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆ ತಡೆಗಟ್ಟಲು ಈ ಗಂಜಿ ತುಂಬಾನೇ ಸಹಕಾರಿಯಾಗಿರುವುದರಿಂದ ಕರ್ಕಡ ಗಂಜಿ ತುಂಬಾನೇ ಪ್ರಸಿದ್ಧಿಯನ್ನು ಪಡೆದಿದೆ. ಇದನ್ನು ಎಲ್ಲಾ ಸಮಯದಲ್ಲಿ ನೀವು ಸವಿಯ ಬಹುದು, ಮಳೆಗಾಲದಲ್ಲಿ ಈ ಅಕ್ಕಿ ಜೊತೆ ಕೆಲವು ಗಿಡಮೂಲಿಕೆಗಳನ್ನು ಸೇರಿಸಿ ಕಿಟ್‌ ರೀತಿ ಮಾಡಿ ಆಯುರ್ವೇದ ಅಂಗಡಿಗಳಲ್ಲಿ ಇಟ್ಟಿರುತ್ತಾರೆ, ಅದನ್ನು ತಂದು ಬಳಸಲಾಗುವುದು. ಈ ಮಟ್ಟಾ ರೈಸ್‌ನ ಪೋಷಕಾಂಶಗಳ ಗುಣಗಳ ಬಗ್ಗೆ ಮತ್ತಷ್ಟು ನೋಡುವುದಾದರೆ... 
ಮೊದಲಿಗೆ ಮಟ್ಟಾ ರೈಸ್‌ ಎಂದರೇನು? ಮಟ್ಟಾ ರೈಸ್‌ ಎಂದರೇನು? ಮಟ್ಟಾ ರೈಸ್ ಭತ್ತವನ್ನು ಕೇರಳದ ಕಪ್ಪು ಮಣ್ಣಿನಲ್ಲಿ ಬೆಳೆಯಲಾಗುವುದು. ಇದರ ಪ್ರಯೋಜನಗಳೇನು? ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ಸ್ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು, ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ. ಇದನ್ನು ಹೇಗೆ ಸೇವಿಸಬೇಕು? ಇದನ್ನು ನೀವು ಪ್ರತಿನಿತ್ಯ ಸೇವಿಸಬಹುದು ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಸೇವಿಸಬೇಡಿ ಗ್ಯಾಸ್ಟ್ರಿಕ್ ಸಮಸ್ಯೆವಿರುವವರು ಇದನ್ನು ತಿನ್ನಬೇಡಿ.

ಶ್ರೀಮಂತರ ಅಕ್ಕಿ

ಮಟ್ಟಾ ರೈಸ್ ದುಬಾರಿ ಆಗಿರುವುದರಿಂದ ಇದನ್ನು ಶ್ರೀಮಂತರು ಬಳಸುತ್ತಾರೆ, ಬಡವರಿಗೆ ಇದು ದುಬಾರಿ ಅಕ್ಕಿ ಎಂದು ಹೇಳಲಾಗುವುದು. ಆದರೆ ಈ ಅಕ್ಕಿ ದುಬಾರಿ ಅನಿಸಿದರೂ ಇದರಲ್ಲಿರುವ ಪೋಷಕಾಂಶದ ಗುಣ ಅಷ್ಟಿದೆ.

ಮಟ್ಟಾ ರೈಸ್‌ನಲ್ಲಿ ಪೋಷಕಾಂಶ ಅಧಿಕವಿದೆ:

ಇದನ್ನು ಪಾಲಿಷ್‌ ಮಾಡಿರುವುದಿಲ್ಲ, ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಲ್ಲಿ ಖನಿಜಾಂಶ, ವಿಟಮಿನ್ಸ್ ಇದ್ದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಗ್ಲುಟೇನ್ ಫ್ರೀ

ಇದರಲ್ಲಿ ಗ್ಲುಟೀನ್ ಅಂಶ ಇರುವುದಿಲ್ಲ. ಗ್ಲುಟೀನ್ ಫ್ರೀ ಆಹಾರ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು. ಇದರ ಸೇವನೆಯಿಂದ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಇದು ತುಂಬಾನೇ ಸಹಕಾರಿಯಾಗಿದೆ.

ಮೆಗ್ನಿಷ್ಯಿಯಂ'

ಮೆಗ್ನಿಷ್ಯಿಯಂ ನಮ್ಮ ಆರೋಗ್ಯಕ್ಕೆ ಅವಶ್ಯಕವಿರುವ ಖನಿಜಾಂಶವಾಗಿದೆ. ಅರ್ಧ ಕಪ್‌ ಮಟ್ಟಾ ರೈಸ್‌ನಲ್ಲಿ 42ಗ್ರಾಂ ಮೆಗ್ನಿಷ್ಯಿಯಂ ಇರುತ್ತದೆ, ಇದರಿಂದ ಸಂಧಿವಾತ, ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಕೆಲವೊಂದು ಕಾಯಿಲೆ ತಡೆಗಟ್ಟುತ್ತದೆ

  • ಇದನ್ನು ತಿನ್ನುವುದರಿಂದ ಮೈ ಬೊಜ್ಜು ತಡೆಗಟ್ಟಬಹುದು
  • ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
  • ರಕ್ತನಾಳಗಳಲ್ಲಿ ಕೊಬ್ಬಿನಂಶ ಸಂಗ್ರಹವಾಗುವುದನ್ನು ತಡೆಗಟ್ಟಲು ಸಹಕಾರಿ.

ದೇಹಕ್ಕೆ ಅಗ್ಯತವಿರುವ ನಾರಿನಂಶ ಅಧಿಕವಿರುತ್ತದೆ

ಮಟ್ಟಾ ರೈಸ್‌ನಲ್ಲಿ ಅಧಿಕ ನಾರಿನಂಶ ಇರುವುದರಿಂದ ಇದರ ಸೇವನೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದನ್ನು ಸ್ವಲ್ಪ ತಿಂದರೆ ಸಾಕು, ಬೇಗನೆ ಹೊಟ್ಟೆ ತುಂಬುವುದು. ಸ್ವಲ್ಪ ಮಟ್ಟರೈಸ್ ತಿನ್ನುವುದರಿಂದ ದಿನಕ್ಕೆ ಅವಶ್ಯಕವಿರುವ ನಾರಿನಂಶ ದೇಹಕ್ಕೆ ಸಿಗುತ್ತದೆ.

ವಿಟಮಿನ್ ಎ ಮತ್ತು ಬಿ ಅಧಿಕವಿರುತ್ತದೆ

ಮಟ್ಟ ರೈಸ್‌ನಲ್ಲಿ ವಿಟಮಿನ್‌ ಎ, ಬಿ ಅಧಿಕವಿರುತ್ತದೆ. ನಮ್ಮ ಕಣ್ಣು ಹಾಗೂ ದೇಹದ ಆರೋಗ್ಯಕ್ಕೆ ತುಂಬಾನೇ 'ಒಳ್ಳೆಯದು.

ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ

ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಿರುವುದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿಡುವಲ್ಲಿಯೂ ಸಹಕಾರಿ. ಅಲ್ಲದೆ ಮಟ್ಟಾ ರೈಸ್ ಸ್ವಲ್ಪ ತಿಂದರೆ ಸಾಕು ಬೇಗನೆ ಹೊಟ್ಟೆ ತುಂಬುವುದರಿಂದ ಫಿಟ್ನೆಸ್‌ ಕಾಪಾಡಬಹುದು ಅಲ್ಲದೆ ಹೈಪರ್‌ಟೆನ್ಷನ್ ಅಪಾಯ ತಡೆಗಟ್ಟಬಹುದು.

ಕ್ಯಾಲ್ಸಿಯಂ ಅಧಿಕವಿರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು

ಇದರಲ್ಲಿ ಕ್ಯಾಲ್ಸಿಯಂ ಅಧಿಕವಿರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು, ಆದ್ದರಿಂದ ಸಂಧಿವಾತದ ಸಮಸ್ಯೆ ತಡೆಗಟ್ಟಲು ಪ್ರಯೋಜನಕಾರಿಯಾಗಿದೆ.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries