ನವದೆಹಲಿ: ರಾಜ್ಯಸಭೆ ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುವ ವೇಳೆ ಮೈಕ್ರೋಫೋನ್ಗಳನ್ನು ಆಫ್ ಮಾಡಲಾಗಿದೆ ಎಂದು ಆರೋಪಿಸಿ ವಿಪಕ್ಷಗಳ ಒಕ್ಕೂಟ I.N.D.I.Aದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.
0
samarasasudhi
ಜುಲೈ 26, 2023
ನವದೆಹಲಿ: ರಾಜ್ಯಸಭೆ ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುವ ವೇಳೆ ಮೈಕ್ರೋಫೋನ್ಗಳನ್ನು ಆಫ್ ಮಾಡಲಾಗಿದೆ ಎಂದು ಆರೋಪಿಸಿ ವಿಪಕ್ಷಗಳ ಒಕ್ಕೂಟ I.N.D.I.Aದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಮಣಿಪುರದಲ್ಲಿನ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ I.N.D.I.Aದ ಸದಸ್ಯರು ಒತ್ತಾಯಿಸಿದ ಖರ್ಗೆ ಅವರ ಮೈಕ್ರೋಫೋನ್ಗಳನ್ನು ಆಫ್ ಮಾಡಿಸುವ ಮೂಲಕ ಬಿಜೆಪಿ ನಾಯಕರು ತಡೆಯೊಡ್ಡಿದ್ದಾರೆ.
ವಿಪಕ್ಷ ನಾಯಕರ ಮಾತಿಗೆ ತಡೆಯೊಡ್ಡುವುದು. ಗದ್ದಲದಲ್ಲಿ ಮಸೂದೆಗಳನ್ನು ಅಂಗೀಕರಿಸುವುದು ವಿಪಕ್ಷಗಳ ಒಕ್ಕೂಟ I.N.D.I.Aದ ಸದಸ್ಯರು ಸಭಾತ್ಯಾಗ ಮಾಡಲು ಕಾರಣ ಎಂದು ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ.