ನವದೆಹಲಿ : ಇಲ್ಲಿನ ಪ್ರಗತಿ ಮೈದಾನದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂತರರಾಷ್ಟ್ರೀಯ ಪ್ರದರ್ಶನ ಹಾಗೂ ಸಮ್ಮೇಳನ ಕೇಂದ್ರ(ಐಇಸಿಸಿ) ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು.
0
samarasasudhi
ಜುಲೈ 27, 2023
ನವದೆಹಲಿ : ಇಲ್ಲಿನ ಪ್ರಗತಿ ಮೈದಾನದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂತರರಾಷ್ಟ್ರೀಯ ಪ್ರದರ್ಶನ ಹಾಗೂ ಸಮ್ಮೇಳನ ಕೇಂದ್ರ(ಐಇಸಿಸಿ) ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, 'ದೆಹಲಿಯು ಅತ್ಯಾಧುನಿಕ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರವನ್ನು ಪಡೆದಿದೆ.
ಹೋಮ ಹವನದ ಮೂಲಕ ಕಟ್ಟಡ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ, ನಂತರ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡಿದರವನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಂಪುಟ ಸದಸ್ಯರು ಭಾಗಿಯಾಗಿದ್ದರು.
123 ಎಕರೆ ಪ್ರದೇಶದ ಪ್ರಗತಿ ಮೈದಾನದಲ್ಲಿ ನಿರ್ಮಾಣವಾಗಿರುವ ಐಇಸಿಸಿ, ಭಾರತದ ಅತಿದೊಡ್ಡ ಪ್ರದರ್ಶನ ಹಾಗೂ ಸಮ್ಮೇಳನ ಕೇಂದ್ರ ಎನ್ನಲಾಗಿದೆ. ಈ ಸಭಾಂಗಣವು ಏಕ ಕಾಲಕ್ಕೆ ಸುಮಾರು 7 ಸಾವಿರ ಮಂದಿ ಕೂರುವ ಸಾಮರ್ಥ್ಯ ಹೊಂದಿದೆ.
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ-20 ಸಮಾವೇಶ ಈ ಕೇಂದ್ರದಲ್ಲಿ ನಡೆಯಲಿದೆ.