HEALTH TIPS

ಎಡನೀರು ಮಠದಲ್ಲಿ ಆ. 15ಕ್ಕೆ ಶತಾಯುಷಿ ವಿದ್ವಾನ್ ಕೆ ಬಾಬು ರೈ ಜನ್ಮ ಶತಮಾನೋತ್ಸವ ಸಂಭ್ರಮ


          ಬದಿಯಡ್ಕ: ದಕ್ಷಿಣ ಭಾರತದ ಹಿರಿಯ ಸಂಗೀತ ವಿದ್ವಾಂಸ,ಸಾಂಸ್ಕøತಿಕ ರಾಯಬಾರಿ, ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ, ಶತಾಯುಷಿ ವಿದ್ವಾನ್ ಕೆ ಬಾಬುರೈ ಕಾಸರಗೋಡು ಅವರ ಜನ್ಮ ಶತಮಾನೋತ್ಸವ ಸಂಭ್ರ್ರಮ ಶ್ರೀ ಎಡನೀರು ಮಠದಲ್ಲಿ ಆ.15 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 

       ಕಾರ್ಯಕ್ರಮದ ಅಂಗವಾಗಿ ಆ.15 ರಂದು ಮಧ್ಯಾಹ್ನ 1.00 ರಿಂದ ಕಾಸರಗೋಡು ಪ್ರದೇಶದ ಆಯ್ದ ನಾಲ್ಕು ಸಂಗೀತ ಸಂಸ್ಥೆಗಳ ವತಿಯಿಂದ ಸಂಗೀತಾರ್ಚನೆ ನಡೆಯಲಿದೆ. ಸಂಜೆ 4:30 ರಿಂದ ಪೌರ ಸನ್ಮಾನ ಸಮಾರಂಭ ನಡೆಯಲಿದೆ. ಬೆಂಗಳೂರಿನ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

         ಈ ಸಂದರ್ಭದಲ್ಲಿ ವಿದ್ವಾನ್ ಕೆ ಬಾಬು ರೈ ಅವರಿಗೆ ಯಕ್ಷಗಾನ ಕಲಾರಂಗ ಉಡುಪಿ ಇದರ "ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ" ಪ್ರಧಾನ ನಡೆಯಲಿದೆ.

         ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಮಾರ್ಗದರ್ಶನದಲ್ಲಿ ವಿದ್ವಾನ್ ಕೆ ಬಾಬು ರೈ ಜನ್ಮ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ಶಾಶ್ವತ ದತ್ತಿನಿಧಿ ಸ್ಥಾಪನೆ, ವರ್ಷಂಪ್ರತಿ ಕೆ ಬಾಬು ರೈಯವರ ಅವರ ಜನ್ಮದಿನದಂದು ಸಂಗೀತ, ಸಂಸ್ಕೃತಿ ಸಾಧಕರಿಗೆ ಪ್ರಶಸ್ತಿ, ನಗದು ಪುರಸ್ಕಾರ ನೀಡಿ ಗೌರವಾಭಿನಂದನೆ, ಸಮಗ್ರವಾದ ಅಭಿನಂದನಾ ಗ್ರಂಥ ಪ್ರಕಟಣೆ, ಸಾಕ್ಷಚಿತ್ರ ದಾಖಲಿಸುವುದು ಮುಂತಾದ ಯೋಜನೆ ಸಿದ್ದಪಡಿಸಲಾಗಿದೆ. ಈ ಮೂಲಕ ಕೆ ಬಾಬು ರೈ ಅವರ ಸಂಗೀತ, ಸಾಂಸ್ಕೃತಿಕ ಸಾಧನೆಯನ್ನು ನಾಡಿಗೆ ಪರಿಚಯಿಸುವ ಅಗತ್ಯವಿದೆ. 

      ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಮದ್ ಎಡನೀರು ಶ್ರೀಗಳು ಆಶೀರ್ವಚನ ನೀಡಿ ಮಾರ್ಗದರ್ಶನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕೆ ಬಾಬುರೈ ಜನ್ಮ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರಾಮ ಪ್ರಸಾದ್ ಕಾಸರಗೋಡು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿವರಾಮ ಕಾಸರಗೋಡು, ಕೋಶಾಧಿಕಾರಿ ಕೆ ಶಶಿಧರ ಶೆಟ್ಟಿ,ಉಪಾಧ್ಯಕ್ಷ ಕೆ.ಎನ್ ವೆಂಕಟ್ರಮಣ ಹೊಳ್ಳ, ಕಾರ್ಯದರ್ಶಿಗಳಾದ ಕೆ ಜಗದೀಶ ಕೂಡ್ಲು, ಕೆ ಗುರುಪ್ರಸಾದ್ ಕೋಟೆಕಣಿ, ವೀ.ಜಿ.ಕಾಸರಗೋಡು, ಪದಾಧಿಕಾರಿಗಳಾದ ರಾಧಾ ಮುರಳಿಧರ್, ಅಶೋಕ ರೈ ಸೂರ್ಲು, ಜಯಾನಂದ ಕುಮಾರ್, ಪ್ರದೀಪ್ ಬೇಕಲ್, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಶ್ರೀಕಾಂತ್ ಕಾಸರಗೋಡು, ಕುಶಲಕುಮಾರ್.ಕೆ ಕನ್ನಡ ಗ್ರಾಮ, ದಿವಾಕರ.ಪಿ. ಅಶೋಕನಗರ, ಲಕ್ಷ್ಮೀಶ ಕಾಸರಗೋಡು ಮುಂತಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries