ನವದೆಹಲಿ: ಕ್ರೀಡಾ ಜಗತ್ತಿನ ಮಹತ್ವದ ಬೆಳವಣಿಗೆಯೊಂದರಲ್ಲಿ 17 ವರ್ಷದ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್ ಅಂತರಾಷ್ಟ್ರೀಯ ಚೆಸ್ ಫೆಡರೇಷನ್ನ ಶ್ರೇಯಾಂಕದಲ್ಲಿ ದಿಗ್ಗಜ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಭಾರತದ ನಂಬರ್ 1 ಆಟಗಾರ ಎನ್ನಿಸಿಕೊಂಡಿದ್ಧಾರೆ.
0
samarasasudhi
ಆಗಸ್ಟ್ 05, 2023
ನವದೆಹಲಿ: ಕ್ರೀಡಾ ಜಗತ್ತಿನ ಮಹತ್ವದ ಬೆಳವಣಿಗೆಯೊಂದರಲ್ಲಿ 17 ವರ್ಷದ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್ ಅಂತರಾಷ್ಟ್ರೀಯ ಚೆಸ್ ಫೆಡರೇಷನ್ನ ಶ್ರೇಯಾಂಕದಲ್ಲಿ ದಿಗ್ಗಜ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಭಾರತದ ನಂಬರ್ 1 ಆಟಗಾರ ಎನ್ನಿಸಿಕೊಂಡಿದ್ಧಾರೆ.
ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ 2ನೇ ಸುತ್ತಿನಲ್ಲಿ ಸ್ಥಳೀಯ ಆಟಗಾರ ಇಸ್ಕ್ಯಾನ್ಡರೊವ್ ವಿರುದ್ದ ಗೆಲುವು ಸಾಧಿಸಿ 2.5 ರೇಟಿಂಗ್ ಅಂಕಗಳನ್ನು ಗಳಿಸಿದ್ದಾರೆ. ಗುಕೇಶ್‌ರ ಲೈವ್ ರೇಟಿಂಗ್ 2755.9 ಅಂಕಕ್ಕೆ ಏರಿಕೆಯಾಗಿದ್ದು, ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನಕ್ಕೇರಿದ್ದಾರೆ. ಆನಂದ್ 2754.0 ಅಂಕ ಹೊಂದಿದ್ದು, ಒಂದು ಸ್ಥಾನ ಇಳಿಕೆ ಕಂಡು 10ನೇ ಸ್ಥಾನ ಪಡೆದಿದ್ದಾರೆ.
1991ರ ಜುಲೈನಲ್ಲಿ ಮೊದಲ ಬಾರಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರ ಪಟ್ಟಿಗೆ ಸೇರ್ಪಡೆಗೊಂಡಿದ್ದ ವಿಶ್ವನಾಥನ್ ಆನಂದ್, 1987ರ ಜನವರಿಯಿಂದಲೂ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ನಂ.1 ಆಟಗಾರನಾಗಿ ಮುಂದುವರೆದಿದ್ದರು. ಗುಕೇಶ್ ಸೆಪ್ಟೆಂಬರ್ 01ರಂದು ಪ್ರಕಟಗೊಳ್ಳುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ರೇಟಿಂಗ್ ಕಾಯ್ದುಕೊಂಡರೆ, 1986ರಲ್ಲಿ ಪ್ರವೀಣ್ ಥಿಪ್ಸೆ ಬಳಿಕ ಆನಂದ್‌ಗಿಂತ ಉತ್ತಮ ರ‍್ಯಾಂಕಿಂಗ್ ಪಡೆದ ಮೊದಲ ಆಟಗಾರ ಎನ್ನಿಸಲಿದ್ದಾರೆ.