ನವದೆಹಲಿ: ಸಂಕಷ್ಟದಲ್ಲಿರುವ ಮಹಿಳೆಯರ ಸಹಾಯಕ್ಕಾಗಿ ಇರುವ 181 ಸಹಾಯವಾಣಿಗೆ 2022ರ ಜುಲೈಯಿಂದ 2023ರ ಜೂನ್‌ವರೆಗೆ 6.30 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಶನಿವಾರ ತಿಳಿಸಿದ್ದಾರೆ.
0
samarasasudhi
ಆಗಸ್ಟ್ 12, 2023
ನವದೆಹಲಿ: ಸಂಕಷ್ಟದಲ್ಲಿರುವ ಮಹಿಳೆಯರ ಸಹಾಯಕ್ಕಾಗಿ ಇರುವ 181 ಸಹಾಯವಾಣಿಗೆ 2022ರ ಜುಲೈಯಿಂದ 2023ರ ಜೂನ್‌ವರೆಗೆ 6.30 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಶನಿವಾರ ತಿಳಿಸಿದ್ದಾರೆ.
'ಡಿಸಿಡಬ್ಲ್ಯೂ ಆರಂಭಿಸಿದ 24*7 ಸಹಾಯವಾಣಿಗೆ ಕೌಟುಂಬಿಕ ಹಿಂಸೆ, ನೆರೆಹೊರೆಯವರೊಂದಿಗಿನ ಜಗಳ, ಅತ್ಯಾಚಾರ, ಅತ್ಯಾಚಾರ ದೌರ್ಜನ್ಯ, ಫೋಕ್ಸೋ, ಅಪಹರಣ, ಸೈಬರ್ ಅಪರಾಧಗಳು ಸೇರಿದಂತೆ 92,004 'ವಿಶೇಷ ಪ್ರಕರಣ'ಗಳ ಕರೆಗಳು ಬಂದಿವೆ' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಕರೆ ಮಾಡಿದ ಎಲ್ಲರಿಗೂ ಸಾಂತ್ವಾನದ ಜೊತೆಗೆ ಪರಿಹಾರವನ್ನು ಸೂಚಿಸಲಾಗುತ್ತಿದೆ. ಅವರ ಕುಂದುಕೊರತೆ ಗಮನಿಗೆ ದೆಹಲಿ ಪೊಲೀಸ್, ಆಸ್ಪತ್ರೆ, ನಿರಾಶ್ರಿತರ ತಾಣಗಳ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಇನ್ನೂ ಕೆಲ ಪ್ರಕರಣಗಳಲ್ಲಿ ಅವರು ಇದ್ದಲ್ಲಿಗೇ ಹೋಗಿ ಸಮಾಲೋಚನೆ (ಕೌನ್ಸೆಲಿಂಗ್) ನೀಡಲಾಗುತ್ತಿದೆ' ಎಂದರು.