ನವದೆಹಲಿ: ಬಿಜೆಪಿಯ ಸಂಸದ ಸುನಿಲ್ ಕುಮಾರ್ ಸಿಂಗ್ ನೇತೃತ್ವದ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯು ಶುಕ್ರವಾರ (ಆಗಸ್ಟ್ 18) ಸಭೆ ಸೇರಲಿದ್ದು, ಸದನದಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು 'ಅಶಿಸ್ತು' ತೋರಿದ ದೂರಿನ ವಿಚಾರಣೆ ನಡೆಸಲಿದೆ.
0
samarasasudhi
ಆಗಸ್ಟ್ 15, 2023
ನವದೆಹಲಿ: ಬಿಜೆಪಿಯ ಸಂಸದ ಸುನಿಲ್ ಕುಮಾರ್ ಸಿಂಗ್ ನೇತೃತ್ವದ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯು ಶುಕ್ರವಾರ (ಆಗಸ್ಟ್ 18) ಸಭೆ ಸೇರಲಿದ್ದು, ಸದನದಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು 'ಅಶಿಸ್ತು' ತೋರಿದ ದೂರಿನ ವಿಚಾರಣೆ ನಡೆಸಲಿದೆ.
ಅಧೀರ್ ರಂಜನ್ ಚೌಧರಿ ಅವರನ್ನು ದುರ್ವರ್ತನೆಗಾಗಿ ಸ್ಪೀಕರ್ ಅವರು ಆಗಸ್ಟ್ 10ರಂದು ಅಮಾನತುಪಡಿಸಿದ್ದರು.
ಅಂದು ಚೌಧರಿ ಮತ್ತು ಬಿಜೆಪಿ ಸದಸ್ಯ ವೀರೇಂದ್ರ ಸಿಂಗ್ ಅವರ ವರ್ತನೆಗೆ ಸ್ಪೀಕರ್ ಓಂ ಬಿರ್ಲಾ ಆಕ್ಷೇಪಿಸಿದ್ದರು. ಸಿಂಗ್ ಅವರು ನಂತರ ಸ್ಪೀಕರ್ ಅವರ ಕ್ಷಮೆ ಕೋರಿದ್ದರು. ಅಮಾನತು ಕೋರಿ ನಿರ್ಣಯ ಮಂಡಿಸಿದ್ದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, 'ಚೌಧರಿ ಅವರು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರೆ ಸಚಿವರ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿದ್ದರು' ಎಂದು ಹೇಳಿದ್ದರು.